ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನೀರ್ ದೋಸೆ, ರನ್ನ, ಉಗ್ರಂ, ಬೆಲ್ ಬಾಟಮ್ ಸೇರುದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿರುವ ನಟಿ ಹರಿಪ್ರಿಯಾ ಕಿರುತೆರೆಗೆ ಕಾಲಿಟ್ಟಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸಂಘರ್ಷ’ ಧಾರಾವಾಹಿಯು ನವರಾತ್ರಿಗೆ ವಿಶೇಷ ಸಂಚಿಕೆಯನ್ನು ಮಾಡುತ್ತಿದ್ದು, ಈ ವಿಶೇಷ ಸಂಚಿಕೆಯಲ್ಲಿ ಚಂದನವನದ ನಟಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರೀಕರಣದಲ್ಲಿ ಭಾಗವಹಿಸಿದ ವಿಡಿಯೋ ಕ್ಲಿಪ್ ಗಳನ್ನು ನಟಿ ಹರಿಪ್ರಿಯಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಹಲವು ಸ್ಟಾರ್ ನಟ, ನಟಿಯರು ರಿಯಾಲಿಟಿ ಶೋ, ಧಾರಾವಾಹಿಗಳ ಕಿರುತೆರೆ ಬರುತ್ತಿರುತ್ತಾರೆ. ಈ ಹಿಂದೆ ನಟರಾದ ಪುನೀತ್ ರಾಜ್ ಕುಮಾರ್, ರವಿಚಂದ್ರನ್, ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಜಗ್ಗೇಶ್, ಗಣೇಶ್ ಸೇರಿದಂತೆ ನಟಿಯರಾದ ರಕ್ಷಿತಾ, ಶೃತಿ,ರಾಗಿಣಿ, ಪ್ರಿಯಾಮಣಿ, ರಚಿತಾ ರಾಮ್ ಸೇರಿ ಹಲವರು ಈಗಾಗಲೇ ಕಿರುತೆರೆಗೆ ಲಗ್ಗೆಯಿಟ್ಟಿದ್ದಾರೆ.
ಇತ್ತೀಚೆಗಷ್ಟೇ ‘ಕನ್ನಡತಿ’ ಧಾರಾವಾಹಿಯ ಮೂಲಕ ಟಗರು ಪುಟ್ಟಿ ಮಾನ್ವಿತಾ ಕಾಮತ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು.