ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗದ ಅಗ್ರ ಶ್ರೇಯಾಂಕಿತ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಸ್ಯಾಂಡಲ್ ವುಡ್ ಸೇರಿದಂತೆ, ಟಾಲಿವುಡ್, ಮತ್ತು ದಕ್ಷಿಣ ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳ ಎದುರು ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ ನಟಿ ರಶ್ಮಿಕಾ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನದೇ ಆದ ಹೆಸರು ಮಾಡಿರುವ ರಶ್ಮಿಕಾ ಗೆ ಗೂಗಲ್ ಇತ್ತೀಚೆಗೆ ಅಪರೂಪದ ಮನ್ನಣೆ ನೀಡಿದೆ.
ರಶ್ಮಿಕಾ ಮಂದಣ್ಣ ಅವರನ್ನು 2020 ರ ವರ್ಷದ ಭಾರತದ ರಾಷ್ಟ್ರೀಯ ಕ್ರಷ್ (ನ್ಯಾಷನಲ್ ಕ್ರಷ್ ಆಫ್ ಇಂಡಿಯಾ) ಎಂದು ಘೋಷಿಸಲಾಗಿದೆ. 2019-20ರಲ್ಲಿ ಗೂಗಲ್ ನಲ್ಲಿ ಹೆಚ್ಚಾಗಿ ನಟಿ ರಶ್ಮಿಕಾ ಮಂದಣ್ಣ ಹೆಸರನ್ನು ಹುಡುಕಿದೆ ಎಂದು ಗೂಗಲ್ ಹೇಳಿಕೆ ನೀಡಿದೆ. ಆದರೆ 2020 ರ ನ್ಯಾಷನಲ್ ಕ್ರಷ್ ಆಫ್ ಇಂಡಿಯಾ ಎಂದು ಸರ್ಚ್ ಮಾಡಿದರೆ, ನ್ಯಾಷನಲ್ ಕ್ರಷ್ ಆಫ್ ಇಂಡಿಯಾ ರಶ್ಮಿಕಾ ಮಂದಣ್ಣ ಎಂದು ಆರಂಭವಾಗುತ್ತಾ, ಅವಳು ಆಯ್ಕೆಮಾಡುವ ಉಡುಪಿನ ಶೈಲಿಯನ್ನು ನಾವು ಖಂಡಿತವಾಗಿಯೂ ಇಷ್ಟಪಡುತ್ತೇವೆ. ನಂತರ, ತನ್ನ ‘ರೇಡಿಯಂಟ್ ಮೇಕಪ್’ ಅನ್ನು ತೋರಿಸುತ್ತವೆ.
ಕನ್ನಡ ಸಿನಿಮಾ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡಿ ತನ್ನ ನಟನೆಯ ಮೂಲಕ ಯಶಸ್ಸಿನ ಶಿಖರವೇರಿದ್ದಾರೇ. ಪ್ರಸ್ತುತ ತೆಲುಗಿನ ಅಲ್ಲು ಅರ್ಜುನ್ ಅವರೊಂದಿಗೆ ‘ಪುಷ್ಪಾ’ ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ, ಕನ್ನಡದಲ್ಲಿ ದ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ‘ಸುಲ್ತಾನ್’ ಚಿತ್ರದ ಮೂಲಕ ತಮಿಳಿನಲ್ಲಿ ಪಾದಾರ್ಪಣೆ ಮಾದಿದ್ದಾರೆ.
ಇಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರು ರಾಷ್ಟ್ರೀಯ ‘ಕ್ರಷ್ ಆಫ್ ಇಂಡಿಯಾ’ ಎಂಬ ಅಪರೂಪದ ಮನ್ನಣೆಯನ್ನು ಗಳಿಸಿದ್ದಾರೆ. ಆದರೆ, ಬಾಲಿವುಡ್ ಹಿಂದಿಯಲ್ಲಿ ಒಂದೇ ಒಂದು ಚಿತ್ರದಲ್ಲಿ ನಟಿಸದಿದ್ದರೂ ನಟಿ ರಶ್ಮಿಕಾಗೆ ಭಾರತದ ರಾಷ್ಟ್ರೀಯ ಕ್ರಷ್ ಎಂದು ಗುರುತಿಸುವುದು ನಿಜಕ್ಕೂ ವಿಶೇಷ ಎಂದು ನೆಟಿಜನ್‌ಗಳು ಪ್ರತಿಕ್ರಿಯಿಸುತ್ತಿದ್ದಾರೆ.