Kantara Chapter 1 | ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾಕ್ಕೂ ಮುನ್ನವೇ ಎಚ್ಚರಿಕೆ ನೀಡಿದ್ದ ದೈವ: ಏನದು?

Kantara Chapter 1 : ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಪ್ರಪಂಚದಾದ್ಯಂತ ಅಭೂತಪೂರ್ವ ಯಶಸ್ಸು ಗಳಿಸಿತ್ತು. ಆಗ ಕಾಂತಾರ ಸಿನಿಮಾದ ಗೆಲುವಿಗೆ ದೈವದ ಆಶೀರ್ವಾದವೇ ಕಾರಣ ಎನ್ನಲಾಗಿತ್ತು. ಇದೀಗ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್…

Kantara Chapter 1

Kantara Chapter 1 : ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಪ್ರಪಂಚದಾದ್ಯಂತ ಅಭೂತಪೂರ್ವ ಯಶಸ್ಸು ಗಳಿಸಿತ್ತು. ಆಗ ಕಾಂತಾರ ಸಿನಿಮಾದ ಗೆಲುವಿಗೆ ದೈವದ ಆಶೀರ್ವಾದವೇ ಕಾರಣ ಎನ್ನಲಾಗಿತ್ತು. ಇದೀಗ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ನಿರ್ಮಾಣ ಆಗುತ್ತಿದ್ದು, ಇದಕ್ಕೆ ಒ೦ದರ ಹಿ೦ದೆ ಒ೦ದರ೦ತೆ ವಿಘ್ನಗಳು ಎದುರಾಗುತ್ತಲೇ ಇವೆ. ಆದರೆ ಇದೀಗ ಸಿನಿಮಾ ನಿರ್ಮಾಣ ಪ್ರಾರಂಭಕ್ಕೂ ಮುಂಚೆಯೇ ದೈವ ಎಚ್ಚರಿಕೆ ನೀಡಿತ್ತು ಎ೦ದು ನಿರ್ಮಾಪಕರು ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹಲವರ ಸಾವು

Rakesh Poojary Kantara Chapter 1

ಈಗ ನಿರ್ಮಾಣ ಹಂತದಲ್ಲಿರುವ ಕಾಂತಾರ ಚಾಪ್ಟರ್ 1 ಸಿನಿಮಾಕ್ಕೆ ಸಂಬಂಧ ಪಟ್ಟಿದ್ದ ಕೆಲವರು ವಿವಿಧ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಕೆಲವರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಸೆಟ್‌ನಲ್ಲಿಯೂ ಕೆಲವು ಅವಘಡಗಳು ಉಂಟಾಗಿವೆ. ಅಪಘಾತಗಳಾಗಿವೆ. ಇದಕ್ಕೆಲ್ಲ ದೈವದ ಶಾಪವೇ ಕಾರಣ ಎ೦ಬ ಸುದ್ದಿಗಳು ಹರಿದಾಡುತ್ತಿವೆ.

Vijayaprabha Mobile App free

ದೈವದ ಎಚ್ಚರಿಕೆ

ನಾವು ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡುವ ಮು೦ಚೆಯೇ ದೈವದ ಬಳಿ ಹೋಗಿದ್ದೆವು, ಪಂಜುರ್ಲಿ ಆಗಲೇ ನಮಗೆ ಎಚ್ಚರಿಕೆ ನೀಡಿತ್ತು. ಚಿತ್ರೀಕರಣದ ಸಂದರ್ಭದಲ್ಲಿ ಸಾಕಷ್ಟು ಅಡೆ-ತಡೆಗಳು ಬರುತ್ತವೆ ಆದರೆ ನೀವು ನಿಲ್ಲಬೇಡಿ, ಇದು ಯಶಸ್ವಿ ಆಗುತ್ತದೆ ಎ೦ದಿತ್ತು. ನಾವು ದೇವರಲ್ಲಿ, ದೈವದಲ್ಲಿ ನಂಬಿಕೆ ಇಡುವ ಜನ, ಪ್ರತಿದಿನವೂ ಪೂಜೆ ಮಾಡಿಯೇ ಚಿತ್ರೀಕರಣ ಪ್ರಾರಂಭಿಸುತ್ತೇವೆ, ದೈವದ ಆಶೀರ್ವಾದಗಳನ್ನು ಪಡೆಯುತ್ತೇವೆ ಎಂದಿದ್ದಾರೆ ಸಹ ನಿರ್ಮಾಪಕ ಚೆಲುವೇ ಗೌಡ.

ಮುನ್ನೆಚರಿಕೆ

ಕೇವಲ ಒಂದು ಅಘಾತಕಾರಿ ಘಟನೆ ಮಾತ್ರ ಸಿನಿಮಾ ಸೆಟ್‌ನಲ್ಲಿ ನಡೆದಿದೆ. ಸಿನಿಮಾ ಸೆಟ್‌ನಲ್ಲಿಯೇ ಎಲ್ಲವೂ ನಡೆದಿದೆ ಎಂಬುದು ಸುಳ್ಳು. ಅಲ್ಲದೆ ಈ ಸಿನಿಮಾ ಭಾರಿ ಬಜೆಟ್ ಸಿನಿಮಾ ಆಗಿದ್ದು, ಇಂಥಹಾ ಬೃಹತ್ ಸಿನಿಮಾಗಳನ್ನು ನಿರ್ಮಾಣ ಮಾಡುವಾಗ ಸೆಟ್‌ನಲ್ಲಿ ಅವಘಡಗಳು ನಡೆಯುವುದು ಸಾಮಾನ್ಯವಾಗಿದ್ದರೂ, ನಾವು ಸಕಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ಕಠಿಣ ಪರಿಸ್ಥಿತಿ

ಸಿನಿಮಾದ ಚಿತ್ರೀಕರಣವನ್ನು ನಾವು ಬಹಳ ಕಠಿಣವಾದ ಪರಿಸ್ಥಿತಿಗಳಲ್ಲಿ ಮಾಡುತ್ತಿದ್ದೇವೆ. ಸಿನಿಮಾದ 80% ಚಿತ್ರೀಕರಣ ಕರಾವಳಿಯ ಕಾಡುಗಳು, ಕಾಡಂಚಿನ ಹಳ್ಳಿಗಳಲ್ಲಿ ಚಿತ್ರೀಕರಣಗೊಂಡಿದೆ. ಸಿನಿಮಾದ ಎಲ್ಲ ತಂತ್ರಜ್ಞರು ನಟರುಗಳು ಬೆಳಿಗ್ಗೆ 4ಕ್ಕೆ ಎದ್ದು ಪ್ರಯಾಣ ಮಾಡಿ ಸೆಟ್ ತಲುಪಬೇಕಾಗಿದ್ದು, ಸಾಕಷ್ಟು ಇಂಟೀರಿಯರ್ನಲ್ಲಿ ಚಿತ್ರೀಕರಣ ನಡೆಯುತ್ತಿರುವ ಕಾರಣದಿಂದ ಚಿತ್ರೀಕರಣದಲ್ಲಿ ಸಾಕಷ್ಟು ಸವಾಲುಗಳು ಇದ್ದೇ ಇರುತ್ತವೆ ಇವು ಸಹ ಕೆಲವು ಅವಘಡಗಳಿಗೆ ಕಾರಣವಾಗಿವೆ ಎಂದಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.