ಹೈದರಾಬಾದ್ : ತೆಲುಗಿನ ಅಕ್ಕಿನೇನಿ ಕುಟುಂಬದ ಸೊಸೆ, ಖ್ಯಾತ ನಟಿ ಸಮಂತಾ ಅವರು ಮೊದಲ ಬಾರಿ ‘ಬಿಗ್ ಬಾಸ್’ ಶೋ ನಡೆಸಿಕೊಟ್ಟಿದ್ದು, ಸಮಂತಾ ನಿರೂಪಣೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ತೆಲುಗು ಮಾ ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್-4 ಅನ್ನು ನಟ ನಾಗಾರ್ಜುನ್ ನಡೆಸಿಕೊಡುತ್ತಿದ್ದಾರೆ. ಆದರೆ ಈ ವಾರ ನಾಗಾರ್ಜುನ್ ಸೊಸೆ ನಟಿ ಸಮಂತಾ ಅವರು ಹೋಸ್ಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಹೌದು, ನಟ ನಾಗಾರ್ಜುನ್ ಅವರು ‘ವೈಲ್ಡ್ ಡಾಗ್’ ಚಿತ್ರೀಕರಣಕ್ಕಾಗಿ ಹಿಮಾಲಯಕ್ಕೆ ಹೋಗಿರುವ ಹಿನ್ನೆಲೆ, ನಟ ನಾಗಾರ್ಜುನ ಅವರ ಮಾತಿನ ಮೇರೆಗೆ ನಟಿ ಸಮಂತಾ ಅವರು ಬಿಗ್ ಬಾಸ್-4 ಶೋ ನಡೆಸಿಕೊಟ್ಟಿದ್ದಾರೆ. ಇನ್ನು ದಸರಾ ಹಬ್ಬದ ಸಮಯದಲ್ಲಿ ಕಿರುತೆರೆ ವೀಕ್ಷಕರು ನಟಿ ಸಮಂತಾ ಅವರನ್ನು ನೋಡಿ ಖುಷ್ ಆಗಿದ್ದಾರೆ.
#Dussehra special #BiggBossTelugu4 with @Samanthaprabhu2 lo chala surprises unnai…Come and have fun!!!
Today at 6 PM on @StarMaa #MaaSundayBiggSunday @AkhilAkkineni8 @ActorKartikeya @starlingpayal @AadhiHyper pic.twitter.com/4HpclEZODB
— starmaa (@StarMaa) October 25, 2020