ನಟಿ ರಶ್ಮಿಕಾ ಬಗ್ಗೆ ಸ್ವಾಮೀಜಿ ಭಯಾನಕ ಭವಿಷ್ಯ!; ಸ್ವಾಮೀಜಿ ನುಡಿದ ಭವಿಷ್ಯವೇನು ..?

ಸೆಲೆಬ್ರಿಟಿಗಳ ಜಾತಕ ನೋಡಿ ಭವಿಷ್ಯ ಹೇಳುವ ದೇಶದ ಪ್ರಸಿದ್ಧ ಜ್ಯೋತಿಷಿ ಎಂದು ಕರೆಸಿಕೊಳ್ಳುವ ತೆಲುಗು ಜ್ಯೋತಿಷಿ ವೇಣು ಸ್ವಾಮಿ ಅವರು ಇದೀಗ ನಟಿ ರಶ್ಮಿಕಾ ಬಗ್ಗೆ ಶಾಂಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಹೌದು, ‘ನಟ ವಿಜಯ್…

rashmika mandanna vijayaprabha news

ಸೆಲೆಬ್ರಿಟಿಗಳ ಜಾತಕ ನೋಡಿ ಭವಿಷ್ಯ ಹೇಳುವ ದೇಶದ ಪ್ರಸಿದ್ಧ ಜ್ಯೋತಿಷಿ ಎಂದು ಕರೆಸಿಕೊಳ್ಳುವ ತೆಲುಗು ಜ್ಯೋತಿಷಿ ವೇಣು ಸ್ವಾಮಿ ಅವರು ಇದೀಗ ನಟಿ ರಶ್ಮಿಕಾ ಬಗ್ಗೆ ಶಾಂಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

Astrologer Venu Swamy

ಹೌದು, ‘ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಜಾತಕ ಪ್ರಕಾರ ಒಟ್ಟಿಗೆ ಇದ್ದಾರೆ. ಆದರೆ ವಿಜಯ್ ಜತೆಗಿನ ಸಂಬಂಧದಿಂದ ರಶ್ಮಿಕಾಗೆ ಕೇಡುಗಾಲ ಶುರುವಾಗಲಿದೆ’ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ ರಶ್ಮಿಕಾ ಶೀಘ್ರ ರಾಜಕೀಯಕ್ಕೆ ಬರಲಿದ್ದು, ಕಾಂಗ್ರೆಸ್ ಪಕ್ಷದಿಂದ ಸಂಸದೆಯಾಗಿ ಸ್ಪರ್ಧಿಸಲಿದ್ದಾರೆ ಎಂದಿದ್ದಾರೆ.

Vijayaprabha Mobile App free

vijay devarakonda and rashmika mandanna vijayaprabha news

ಅಷ್ಟೇ ಅಲ್ಲ, ಜ್ಯೋತಿಷಿ ವೇಣು ಸ್ವಾಮಿ ಅವರು ಈ ಹಿಂದೆ, ಸಿನಿಮಾಗಳ ಏಳಿಗೆ ಜೊತೆಗೆ ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಸಂಸದರಾಗಿ ಗೆಲ್ಲುತ್ತಾರೆ ಎಂದು ಹೇಳಿದ್ದರು. ನನ್ನ ಸಲಹೆಯ ಮೇರೆಗೆ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಇಬ್ಬರೂ ಬೇರೆಯಾದರು ಮತ್ತು ಆಯಾ ವೃತ್ತಿಜೀವನದಲ್ಲಿ ಯಶಸ್ವಿಯಾದರು ಎಂದು ಹೇಳಿಕೆ ನೀಡಿ ವೇಣು ಸ್ವಾಮಿ ಸಂಚಲನ ಮೂಡಿಸಿದ್ದರು.

ಇನ್ನು, ತೆಲುಗಿನ ಪವರ್ ಸ್ಟಾರ್, ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್‌ಗೆ ರಾಜಕೀಯದಲ್ಲಿ ಭವಿಷ್ಯವಿಲ್ಲ. ಅವರು ಶೀಘ್ರದಲ್ಲೇ ನಾಲ್ಕನೇ ಮದುವೆ ಮಾಡಿಕೊಳ್ಳುತ್ತಾರೆ ಎಂದು ಭವಿಷ್ಯ ಹೇಳಿ ಅಚ್ಚರಿ ಮೂಡಿಸಿದ್ದರು. ಖ್ಯಾತ ನಟಿ ಸಮಂತಾ ವಿಚ್ಛೇದನ ಮತ್ತು ನಯನತಾರಾ ವಿವಾಹದ ಕುರಿತಂತೆ ವೇಣು ಸ್ವಾಮಿ ಹೇಳಿಕೆ ನೀಡಿದ್ದರು

ಇದನ್ನು ಓದಿ : ಶೀಘ್ರದಲ್ಲೇ ರಶ್ಮಿಕಾ ಮಂದಣ್ಣ ರಾಜಕೀಯಕ್ಕೆ ಎಂಟ್ರಿ!; ಸಂಚಲನ ಮೂಡಿಸಿದೆ ಖ್ಯಾತ ಜ್ಯೋತಿಷಿ ನುಡಿದ ಭವಿಷ್ಯ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.