ದಕ್ಷಿಣ ಭಾರತದಲ್ಲಿ ನಂಬರ್ 1 ನಾಯಕಿಯಾಗಿ ಮಿಂಚಿದ್ದ ಖ್ಯಾತ ನಟಿ ತ್ರಿಷಾ ಕೃಷ್ಣನ್ ರಾಜಕೀಯಕ್ಕೆ ಬರಲಿದ್ದಾರೆ ಎನ್ನುವ ಸುದ್ದಿ ತಮಿಳು ನಾಡಿನಲ್ಲಿ ಭಾರೀ ಸಂಚಲನ ಮೂಡಿಸಿದೆ.
ಹೌದು, ನಟಿ ತ್ರಿಷಾ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ ಎಂದು ತಮಿಳುನಾಡು ಕಾಂಗ್ರೆಸ್ ಪಕ್ಷದ ಮೂಲಗಳು ಖಚಿತಪಡಿಸಿವೆ. ನಟಿ ತ್ರಿಷಾ ರಾಜಕೀಯ ಪ್ರವೇಶದ ಹಿಂದೆ ತಮಿಳು ನಟ ದಳಪತಿ ವಿಜಯ್ ಕೈವಾಡವಿದೆ ಎಂಬ ಸುದ್ದಿ ಕೂಡ ಕಾಲಿವುಡ್ ನಲ್ಲಿ ಕೇಳಿ ಬರುತ್ತಿದ್ದು, ತ್ರಿಷಾಗೆ ರಾಜಕೀಯಕ್ಕೆ ಬರುವಂತೆ ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನಲಾಗಿದೆ.
ದಿವಂಗತ ನಟಿ ಜಯಲಲಿತಾ, ಎಂಜಿಆರ್ ತರಹ ತ್ರಿಷಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಲಿದ್ದಾರಾ ಎಂಬ ಸುದ್ದಿಗೆ ಅವರು ಈ ಹಿಂದೆ ಹೌದೆಂದಿದ್ದರು. ಇನ್ನು, ನಟಿ ತ್ರಿಷಾ ಡಿಎಂಕೆ ಅಥವಾ ಎಐಎಡಿಎಂಕೆ ಬಿಟ್ಟು ಕಾಂಗ್ರೆಸ್ ಪಕ್ಷ ಯಾಕೆ ಸೇರುತ್ತಿದ್ದಾರೆ ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದು, ತ್ರಿಷಾ ಕುರಿತಾದ ಸುದ್ದಿ ಬಗೆಗಿನ ಸತ್ಯಾಸತ್ಯತೆ ತಿಳಿಯಬೇಕಾದರೆ ಇನ್ನೂ ಕೆಲವು ದಿನ ಕಾಯಲೇಬೇಕು.