ಹೊಸಪೇಟೆ: ಸ್ವಾತಂತ್ರೋತ್ಸವದ ಅಂಗವಾಗಿ ಆ.15ರಂದು ಹೊಸಪೇಟೆಯಲ್ಲಿ, ಕರುನಾಡ ಕ್ರಿಯಾಶೀಲ ಸಮಿತಿ ವತಿಯಿಂದ ಗುಡ್ಡ ಹತ್ತುವ ಹಾಗೂ ಓಟದ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲು ಬಾಲಿವುಡ್ ಖ್ಯಾತ ನಟಿ ಸನ್ನಿ ಲಿಯೋನ್‌ಗೆ ಆಹ್ವಾನ ನೀಡಲಾಗಿದೆ.
ವಿಜಯನಗರದಲ್ಲಿ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ್ ಖುದ್ದು ನಟಿ ಸನ್ನಿ ಲಿಯೋನ್ ಅವರನ್ನು ಭೇಟಿ ಮಾಡಿ, ಈ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರಧಾನ ಮಾಡಲು ಸನ್ನಿ ಲಿಯೋನ್ ಆಹ್ವಾನ ನೀಡಿನೀಡಲಾಗಿದೆ.
ಹೌದು, ಆಗಸ್ಟ್ 15ರಂದು ಚಾಂಪಿಯನ್ ಸಿನಿನಾ ತಂಡ ಹೊಸಪೇಟೆಗೆ ಆಗಮಿಸುತ್ತಿದ್ದು, ಈ ಚಿತ್ರದಲ್ಲಿ ಸನ್ನಿ ಲಿಯೋನ್ ಐಟಂ ಸಾಂಗ್ ಒಂದಕ್ಕೆ ಹಜ್ಜೆ ಹಾಕಿದ್ದಾರೆ. ಇನ್ನು, ನಟಿ ಸನ್ನಿ ಲಿಯೋನ್ ಬರುವ ಸುದ್ದಿ ಕೇಳಿ ಹೊಸಪೇಟೆಯ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.