ಮಾರಾಕಾಸ್ತ್ರಗಳೊಂದಿಗೆ ಅಲಯನ್ಸ್ ವಿವಿಗೆ ನುಗ್ಗಿದ ಹಿನ್ನೆಲೆಯಲ್ಲಿ ಬಹುಭಾಷಾ ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿದ್ದು, ಬಂಧನದ ಭೀತಿ ಎದುರಾಗಿದೆ.
ಹೌದು, ಕಾಲೇಜು ನಮ್ಮದು ಅಂತಾ ಅಲಯನ್ಸ್ ವಿವಿಗೆ ಮಧುಕರ್ ಅಂಗೂರ್ ಹಾಗೂ ಸ್ವರ್ಣಲತಾ ಅವರು ಕಾಲೇಜಿಗೆ ಅಕ್ರಮವಾಗಿ ಮಾರಕಾಸ್ತ್ರಗಳೊಂದಿಗೆ ನುಗ್ಗಿದ ಆರೋಪವಿದ್ದು, ಈ ಬಗ್ಗೆ ಅಲಯನ್ಸ್ ವಿವಿ ವಕ್ತಾರರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ. ಸದ್ಯ ಪ್ರಕರಣ ಸಂಬಂಧ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನು, ಶ್ರೀಲೀಲಾ ಕನ್ನಡದ ಕಿಸ್ ಮತ್ತು ಭರಾಟೆ ಚಿತ್ರದಲ್ಲಿ ನಟಿಸಿದ್ದು, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೂ ಶ್ರೀಲೀಲಾ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.