ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದು, ತಾವು ಒಪ್ಪಿಕೊಂಡಿದ್ದ ಬಾಲಿವುಡ್ ಚಿತ್ರಗಳಿಗೆ ಗುಡ್‌ಬೈ ಹೇಳಲಿದ್ದಾರೆ ಎಂದು ವರದಿಯಾಗಿದೆ.
ಅನಾರೋಗ್ಯಕ್ಕೆ ತುತ್ತಾಗಿರುವ ನಟಿ ಸಮಂತಾ ತಾವು ಒಪ್ಪಿಕೊಂಡಿದ್ದ ಬಾಲಿವುಡ್ ಚಿತ್ರಗಳನ್ನು ಕೈಬಿಡಲಿದ್ದಾರೆ ಎಂಬ ಸುದ್ದಿಗೆ ನಟಿ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಸಮಂತಾ ವಕ್ತಾರರು ಈ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದಾರೆ. ʻಸಮಂತಾ ಸದ್ಯಕ್ಕೆ ವಿಶ್ರಾಂತಿಯಲ್ಲಿದ್ದಾರೆ.
ವಿಜಯ್ ದೇವರಕೊಂಡ ಅಭಿನಯದ ಕುಶಿ ಚಿತ್ರದ ಶೂಟಿಂಗ್ ಮುಗಿದ ಬಳಿಕ ಸಮಂತಾ, ನಾಲ್ಕೈದು ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಮಂತಾ ಒಪ್ಪಿಕೊಂಡಿದ್ದ ಕೆಲವು ಬಾಲಿವುಡ್ ಚಿತ್ರಗಳು ನಟಿಯ ಕೈತಪ್ಪುವ ಸಾಧ್ಯತೆಯಿದೆ. ಯಶೋದಾ ಚಿತ್ರದ ರಿಲೀಸ್ ವೇಳೆಯಲ್ಲೂ ಸಮಂತಾ ಹೆಚ್ಚಾಗಿ ಕಾಣಿಸಿಕೊಂಡಿಲ್ಲ.