ದಕ್ಷಿಣ ಭಾರತದ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿರುವ ಖ್ಯಾತ ನಟಿ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು, ಸಮಂತಾ ಬಗ್ಗೆ ಸದ್ಯ ವೈರಲ್ ಆಗುತ್ತಿರುವ ಸುದ್ದಿಯೊಂದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಹೌದು, ಅಕ್ಕಿನೇನಿ ನಾಗ ಚೈತನ್ಯ ಹಾಗೂ ಸಮಂತಾ ನಾಲ್ಕು ವರ್ಷಗಳಕಾಲ ಪ್ರೀತಿಸಿ ಮದುವೆಯಾಗಿದ್ದರು. ನಂತರ ಇಬ್ಬರ ಮನಸ್ತಾಪ ಉಂಟಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಇಬ್ಬರೂ ಬೇರ್ಪಟ್ಟು ಸುಮಾರು ಒಂದು ವರ್ಷ ಕಳೆದಿದ್ದು,ಈಗಲೂ ಇಬ್ಬರಿಗೂ ಸಂಬಂಧಿಸಿದ ಕೆಲವು ಸುದ್ದಿಗಳು ಹೊರಬರುತ್ತಲೇ ಇವೆ.
ಹೌದು, ಕಳೆದ ಕೆಲವು ತಿಂಗಳುಗಳಿಂದ ಸಮಂತಾ ಮದುವೆಗೆ ಸಂಬಂಧಿಸಿದ ಸುದ್ದಿ ವೈರಲ್ ಅಗಿದ್ದು, ಸಮಂತಾ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗಾಸಿಪ್ ಸುದ್ದಿ ಸೃಷ್ಟಿಯಾಗಿದ್ದು, ನಾಗ ಚೈತನ್ಯ, ಸಮಂತಾ ಮತ್ತೆ ಒಂದಾಗ್ತಾರಾ ಅನ್ನೋ ಮಾತು ಕೇಳಿಬಂದಿತ್ತು. ಆದರೆ, ಇದೀಗ ಸಮಂತಾ 2ನೇ ಮದುವೆ ಬಗ್ಗೆ ವದಂತಿ ಹಬ್ಬಿದ್ದು, 2ನೇ ಮದುವೆಗೆ ಸಮಂತಾ ರೆಡಿಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದಕ್ಕೆ ಪೂರಕವೆಂಬಂತೆ ಕಳೆದ ಕೆಲವು ದಿನಗಳಿಂದ ಸಮಂತಾ ಮುಂಬೈನಲ್ಲೇ ಉಳಿದುಕೊಂಡಿದ್ದು, ಬಿಟೌನ್ ವ್ಯಕ್ತಿಯನ್ನು ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ.