ಪುರುಷರ ಸಾಮರ್ಥ್ಯವನ್ನು ಮ್ಯಾಗಿಗೆ ಹೋಲಿಸಿ ಟ್ರೋಲ್ ಆಗಿದ್ದ ಬಹುಭಾಷಾ ನಟಿ ರೆಜಿನಾ ಕ್ಯಾಸ್ಸಂದ್ರ, ಇದೀಗ ಲಿಪ್‌ಲಾಕ್ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗಿದೆ.
ಹೌದು, ಶಾಕಿನಿ ಡಾಕಿನಿ ಸಿನಿಮಾ ಪ್ರಚಾರ ವೇಳೆ ಸಂದರ್ಶನದಲ್ಲಿ ಮಾತನಾಡಿರುವ ನಟಿ ರೆಜಿನಾ ಕ್ಯಾಸಂಡ್ರಾ, “ ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ ಥರ, ಏಕೆಂದರೆ ಇವೆರಡು ಕೂಡ ಎರಡೇ ನಿಮಿಷದಲ್ಲಿ ಮುಗಿಯುತ್ತದೆ” ಎಂದಿರುವ ವಿಡಿಯೋ ವೈರಲ್ ಆಗಿತ್ತು.
ಆದರೆ, ಈಗ ನಟಿ ರೆಜಿನಾ ಲಿಪ್‌ಲಾಕ್ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗಿದ್ದು, ‘ಒಂದು ಸಲ ಇದ್ದಕ್ಕಿದ್ದಂತೆ ಹುಡುಗಿಯೊಬ್ಬಳು ಬಂದು ನನ್ನ ತುಟಿಗೆ ಮುತ್ತಿಟ್ಟಳು. ನನಗೆ ಶಾಕ್ ಮಾತ್ರವಲ್ಲ, ಸರ್ಪ್ರೈಸ್ ಕೂಡ ಆಯ್ತು. ಆದರೆ ಅವಳನ್ನು ಹಿಂದಕ್ಕೆ ದೂಕಲಿಲ್ಲ. ಹುಡುಗನಾಗಿದ್ದರೆ ಖಂಡಿತ ಕಪಾಳಕ್ಕೆ ಬಾರಿಸುತ್ತಿದ್ದೆ’ ಎಂದು ನಟಿ ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು, ನಟಿ ರೆಜಿನಾಗೆ ‘ನೀವು ಸಲಿಂಗಿನಾ ರೆಜಿನಾ?’ ಎಂದು ಲೇವಡಿ ಮಾಡಿದ್ದಾರೆ.