ಮುಂಬೈ: ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆ ವಿರುದ್ಧ ಬಿನ್ನಾಭಿಪ್ರಾಯ, ರೈತರನ್ನು ಭಯೋತ್ಪಾದಕರು ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಲಿಪ್ ಲಾಕ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಸದ್ಯ ನಟಿ ಕಂಗನಾ ರನೌತ್ ತನ್ನ ಸೋದರಳಿಯನನ್ನು ಚುಂಬಿಸುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದೂ ವೈರಲ್ ಆಗಿವೆ.
ಈ ಕುರಿತು ನಟಿ ಕಂಗನಾ ರನೌತ್ ತನ್ನ ಸೋದರಳಿಯನನ್ನು ಚುಂಬಿಸುತ್ತಿರುವ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿ ಟ್ವೀಟ್ ಮಾಡಿದ್ದೂ, ನಾನು ಚಿತ್ರೀಕರಣಕ್ಕೆ ಹೊರಟಾಗ, ನನ್ನ ಸೋದರಳಿಯ ಪೃಥ್ವಿ ಹೋಗಬೇಡಿ ಎಂದು ಹೇಳಿದ. ನಾನು ಕೆಲಸ ಮಾಡಬೇಕು ಹೋಗುತ್ತೇನೆ ಎಂದು ಒತ್ತಾಯಿಸಿದೆ. ತಕ್ಷಣ ಆತ ನನ್ನ ಮಡಿಲಲ್ಲಿ ಕುಳಿತು ನಗುತ್ತಾ, ಸರಿ ನೀವು ಹೋಗಿ ಆದರೆ 2 ನಿಮಿಷ ನಿಮ್ಮೊಂದಿಗೆ ಕುಳಿತುಕೊಳ್ಳಬಹುದೇ ಎಂದು ಕೇಳಿದ. ಆಗ ಆತನನ್ನು ನೋಡಿ ನಾನು ಭಾವುಕಳಾದೆ ಎಂದು ಟ್ವೀಟ್ ಮಾಡಿದ್ದಾರೆ.
When we left for the shoot, he said don’t go, I insisted I need to work, he looked thoughtful and immediately sat in my lap and said smilingly….ok you go but let me sit with you for two mins…. still get tears thinking about his face ❤️ pic.twitter.com/avGiwoLXLG
— Kangana Ranaut (@KanganaTeam) November 22, 2020