ತೆಲುಗು ಟಿವಿ ವಾಹಿನಿಗಳ ಜನಪ್ರಿಯ ನಿರೂಪಕಿ, ಟಾಲಿವುಡ್ ನಟಿ ಅನಸೂಯಾ ಭಾರದ್ವಾಜ್ ತನ್ನನ್ನು ‘ಆಂಟಿ’ ಎಂದು ಕರೆದು ಟ್ರೋಲ್ ಮಾಡಿದ ನೆಟ್ಟಿಗರ ವಿರುದ್ಧ ಆಕ್ರೋಶಗೊಂಡಿದ್ದು, ಇನ್ಮುಂದೆ ಈ ರೀತಿ ಟ್ರೋಲ್ ಮಾಡಿದರೆ ದೂರು ದಾಖಲಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ನಟಿ ಅನಸೂಯಾ ಮತ್ತು ನಟ ವಿಜಯ್ ದೇವರಕೊಂಡ ನಡುವೆ ಜಗಳವಾಗಿತ್ತು. ಇತ್ತೀಚೆಗೆ ಬಿಡುಗಡೆಯಾದ ವಿಜಯ್ ಅವರ ‘ಲೈಗರ್’ ಚಿತ್ರ ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆ, ನಟಿ ಅನಸೂಯಾ,ಹಳೆ ಕೋಪ ಇಟ್ಟುಕೊಂಡು “ಕರ್ಮ ಅನುಭವಿಸಲೇಬೇಕು” ಎಂಬ ದಾಟಿಯಲ್ಲಿ ವಿಜಯ್ ಗೆ ಅನಸೂಯಾ ಟಾಂಗ್ ನೀಡಿದ್ದರು.
ಇದರಿಂದ ಕೆರಳಿ ಕೆಂಡವಾದ ನಟ ವಿಜಯ್ ದೇವರಕೊಂಡ ಫ್ಯಾನ್ಸ್, ಅನಸೂಯಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದು, ಆಂಟಿ ಎಂದು ಕರೆದಿದ್ದಾರೆ. ಟ್ರೋಲ್ ದಾಳಿಯಿಂದ ಬೇಸತ್ತ ನಟಿ ಅನಸೂಯ ದೂರು ನೀಡಲು ಮುಂದಾಗಿದ್ದಾರೆ. ಕೆಲ ವರದಿಗಳ ಪ್ರಕಾರ, ಟ್ರೋಲ್ ಪೇಜ್ ಗಳ ಸ್ಕ್ರೀನ್ ಶಾಟ್ ಸಹಿತ ನಟಿ ಅನಸೂಯ ದೂರು ನೀಡಿದ್ದಾರೆ ಎನ್ನಲಾಗಿದೆ.