ಮುಂಬೈ: ಬಾಲಿವುಡ್ ಖ್ಯಾತ ನಟಿ ಅಮೀಷಾ ಪಟೇಲ್ ವಿರುದ್ಧ ಹಣ ವಂಚನೆ ಆರೋಪ ಕೇಳಿ ಬಂದಿದ್ದು, ನಟಿಯು ವ್ಯಕ್ತಿಯೊಬ್ಬರಿಂದ ₹2.50 ಕೋಟಿ ಹಣ ಪಡೆದು ಹಿಂದಿರುಗಿಸಿರಲಿಲ್ಲ ಎಂದು ದೂರು ದಾಖಲಾಗಿದ್ದು, ಜಾರ್ಖಂಡ್ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ.
ಅಜಯ್ ಕುಮಾರ್ ಸಿಂಗ್ ಎಂಬುವರು ನಟಿ ಅಮೀಷಾ ಪಟೇಲ್ ಅವರ ವಿರುದ್ಧ ದಾಖಲಿಸಿದ್ದು, ನಟಿ ಅಮೀಷಾ ಪಟೇಲ್ ತಮ್ಮ ‘ದೇಸಿ ಮ್ಯಾಜಿಕ್’ ಚಿತ್ರಕ್ಕೆ ಹೂಡಿಕೆ ಮಾಡುವಂತೆ ಅಜಯ್ ಕುಮಾರ್ ಸಿಂಗ್ ಅವರಿಗೆ ಮನವಿ ಮಾಡಿದ್ದರು. ಅದರಂತೆ ಅಜಯ್ ಅವರು 2.50 ಕೋಟಿ ಹಣವನ್ನು ಅಮೀಷಾ ಪಟೇಲ್ ಅವರ ಖಾತೆಗೆ ವರ್ಗಾವಣೆ ಮಾಡಿದ್ದೂ, ನಂತರ ಸಿನಿಮಾ ನಿರ್ಮಾಣ ಆಗಲೇ ಇಲ್ಲ.
ಇದರಿಂದ ಅಜಯ್ ಕುಮಾರ್ ಸಿಂಗ್ ಅವರು ನಟಿ ಅಮೀಷಾ ಅವರಿಗೆ ಹಣ ವಾಪಾಸ್ ಕೊಡುವಂತೆ ಕೇಳಿದ್ದಕ್ಕೆ ಅಮಿಷಾ ಪಟೇಲ್ ತಮ್ಮ ಹೆಸರಿನ ಚೆಕ್ ನೀಡಿದ್ದಾರೆ. ಆದರೆ ಆ ಚೆಕ್ ಬೌನ್ಸ್ ಆಗಿದ್ದು ನಟಿ ಅಮೀಷಾ ಪಟೇಲ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಮೀಷಾ ಪಟೇಲ್ ‘ಕಹೋನಾ ಪ್ಯಾರ್ ಹೇ’, ‘ಗದರ್’ ಸೇರಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, ತೆಲುಗು, ತಮಿಳು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ.