ಮುಂಬೈ: ನಟ ಪ್ರಭಾಸ್‌ರ ‘ಕಲ್ಕಿ 2898 AD’, ಜೂನಿಯರ್ NTRರ ‘ದೇವರ’ ನಂತರ, ಈಗ ಮಲಯಾಳಂ ಸ್ಟಾರ್ ದುಲ್ಕರ್ ಸಲ್ಮಾನ್ ತನ್ನ ತೆಲುಗು ಚಿತ್ರ ‘ಲಕ್ಕಿ ಭಾಸ್ಕರ್’ ಮೂಲಕ ಹಿಂದಿ ಚಲನಚಿತ್ರ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದ್ದಾರೆ. ಅಕ್ಟೋಬರ್ 31 ರಂದು ಬಿಡುಗಡೆಯಾಗಲಿರುವ ದುಲ್ಕರ್ ಸಲ್ಮಾನ್ ಅವರ ತೆಲುಗು ಚಿತ್ರವು ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ಉತ್ತರ ಭಾರತದಲ್ಲಿ ಹಿಂದಿ ಪ್ರೇಕ್ಷಕರ ಗಮನವನ್ನು ಸೆಳೆಯಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಚಿತ್ರದಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬ ಗೊತ್ತಿಲ್ಲದೇ ದೊಡ್ಡ ಹಗರಣವನ್ನು ಬಯಲಿಗೆಳೆದು ರಾತ್ರೋರಾತ್ರಿ ಸಂಚಲನ ಸೃಷ್ಟಿಸುವ ಕಥೆಯನ್ನು ಹೊಂದಿದೆ. ಜೊತೆಗೆ ರೊಮ್ಯಾಂಟಿಕ್ ಹಾಡುಗಳನ್ನು ಹೊಂದಿದ್ದು ಉತ್ತರ ಭಾರತದ ಪ್ರೇಕ್ಷಕರನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಉತ್ತಮ ಮನರಂಜನೆಯ ಅಂಶಗಳನ್ನು ಹೊಂದಿದೆ ಎನ್ನಲಾಗಿದೆ.
ತೆಲುಗು ಸೂಪರ್‌ಸ್ಟಾರ್‌ಗಳಾದ ಪ್ರಭಾಸ್ ಮತ್ತು ಜೂನಿಯರ್ ಎನ್‌ಟಿಆರ್ ನಂತರ, ದಕ್ಷಿಣ ಭಾರತದ ಚಲನಚಿತ್ರ ಪ್ರೇಕ್ಷಕರನ್ನು ಆಕರ್ಷಿಸಲು ದುಲ್ಕರ್ ಅವರ ಚಲನಚಿತ್ರಗಳನ್ನು ಸಹ ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ, ತೆಲುಗು ನಟ-ನಟಿಯರು ದಕ್ಷಿಣದ ರಾಜ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ತೆಲುಗು ರಾಜ್ಯಗಳನ್ನು ಮೀರಿ ತಮ್ಮ ಅಭಿಮಾನಿಗಳನ್ನು ಸ್ಥಾಪಿಸುತ್ತಿದ್ದಾರೆ.
ದುಲ್ಕರ್ ಮಲಯಾಳಂನ ದೊಡ್ಡ ಸ್ಟಾರ್ ನಟರಾಗಿದ್ದು, ಈಗ ಅವರು ಥ್ರಿಲ್ಲರ್ ಚಿತ್ರದ ಮೂಲಕ ತಮ್ಮ ರಾಜ್ಯ ಕೇರಳದ ಜೊತೆಗೆ ತಮಿಳು ಮತ್ತು ಕನ್ನಡದಲ್ಲಿ ವೀಕ್ಷಕರ ಗಮನವನ್ನೂ ಸೆಳೆಯಲಿದ್ದಾರೆ. ಇದು ವಿವಿಧ ಭಾಷೆಯ ಪ್ರೇಕ್ಷಕರನ್ನೂ ತನ್ನತ್ತ ಸೆಳೆಯುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.
ಏತನ್ಮಧ್ಯೆ, ‘ಮಹಾನಟಿ’ ಮತ್ತು ‘ಸೀತಾ ರಾಮಂ’ ನಂತಹ ಹಿಟ್‌ಗಳ ನಂತರ ಹಾಗೂ ‘ಕಲ್ಕಿ 2898 AD’ ನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ದುಲ್ಕರ್ ಅಲ್ಪಪಾಲು ತೆಲುಗು ಮಾರುಕಟ್ಟೆಯಲ್ಲೂ ಹೆಸರು ಗಳಿಸಿದ್ದಾರೆ. ಉತ್ತಮವಾದ ನಟನೆಯ ಪ್ರಭಾವದಿಂದಲೇ ಅವರನ್ನು ತೆಲುಗು ವೀಕ್ಷಕರಲ್ಲಿ ಮನೆಮಾತಾಗಿಸಿದೆ. ಮತ್ತು ಪ್ರೇಕ್ಷಕರಿಗೆ ಹತ್ತಿರ ಎನಿಸುವಂತಹ ಪಾತ್ರಗಳನ್ನು ಮಾಡುತ್ತಿರುವುದು ಅವರ ಅಭಿಮಾನಿಗಳ ಗುಂಪನ್ನು ಹೆಚ್ಚಿಸಲಿದೆ ಎನ್ನುವ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ.