ಇಂದು ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ; ವಿಷ್ಣುವರ್ಧನ್‌ ಸ್ಮಾರಕದ ವಿಶೇಷತೆಗಳೇನು?

ಕನ್ನಡದ ಮೇರುನಟ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆಗೆ ಕ್ಷಣಗಣನೆ ಶುರುವಾಗಿದ್ದು, ಈ ಮೂಲಕ 13 ವರ್ಷಗಳ ಕನಸು ಇಂದು ನನಸಾಗಲಿದೆ. ವಿಷ್ಣು ಅಭಿಮಾನಿಗಳು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಜಾತ್ರೆಯ ವಾತಾವರಣ…

ಕನ್ನಡದ ಮೇರುನಟ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆಗೆ ಕ್ಷಣಗಣನೆ ಶುರುವಾಗಿದ್ದು, ಈ ಮೂಲಕ 13 ವರ್ಷಗಳ ಕನಸು ಇಂದು ನನಸಾಗಲಿದೆ. ವಿಷ್ಣು ಅಭಿಮಾನಿಗಳು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಜಾತ್ರೆಯ ವಾತಾವರಣ ಸೃಷ್ಟಿಯಾಗಲಿದೆ.

ಮೈಸೂರಿನ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗಿರುವ ಸ್ಮಾರಕ, ಬೆಂಗಳೂರು-ಮೈಸೂರು ರಸ್ತೆಯಲ್ಲಿ ವಿಷ್ಣು ಕಟೌಟ್ ಗಳು ರಾರಾಜಿಸುತ್ತಿವೆ. ವಿಷ್ಣುವರ್ಧನ್ ಅವರ ಗೀತೆಗಳು, ಜಾನಪದ ನೃತ್ಯ, ಜಾನಪದ ಕಲೆಗಳನ್ನು ಬಿಂಬಿಸುವಂತಹ ಯೋಜನೆ ಸಿದ್ಧವಾಗಿದ್ದು, ಕ್ಷಣಗಣನೆ ಆರಂಭವಾಗಿದೆ.

ಇಂದು ಬೆಳಿಗ್ಗೆ 11ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟಿಸಲಿದ್ದಾರೆ. 5 ಎಕರೆ ಜಾಗದಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಗಿದ್ದು, ಒಟ್ಟು 27 ಸಾವಿರ ಚದರಡಿಯಲ್ಲಿ ಸ್ಮಾರಕದ ಕಟ್ಟಡ ತಲೆಯೆತ್ತಿದೆ. ಇದರಲ್ಲಿ ಗ್ಯಾಲರಿ, ಆಡಿಟೋರಿಯಂ, ವಿಷ್ಣು ಪುತ್ಥಳಿ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ ಇರಲಿದೆ.

Vijayaprabha Mobile App free

ವಿಷ್ಣುವರ್ಧನ್‌ ಸ್ಮಾರಕದ ವಿಶೇಷತೆಗಳೇನು?

ಮೈಸೂರಿನ ಉದ್ಬೂರಿನಲ್ಲಿ 3 ಎಕರೆಯಲ್ಲಿ ಸ್ಮಾರಕ ನಿರ್ಮಾಣ

11 ಕೋಟಿ ರೂ ವೆಚ್ಚ, ವಿಷ್ಣು ನಟಿಸಿರುವ ಚಲನಚಿತ್ರ, ಅವರ ಜೀವನ ಚರಿತ್ರೆಯ 680 ಛಾಯಾಚಿತ್ರ-ಪೋಸ್ಟರ್‌ಗಳ ಪ್ರದರ್ಶನ

ಕೃಷ್ಣ ಶಿಲೆಯಲ್ಲಿ ನಿರ್ಮಿಸಿರುವ 7 ಅಡಿ ಎತ್ತರದ ವಿಷ್ಣು ಪ್ರತಿಮೆ

ವಿಷ್ಣು ಚಿತಾಭಸ್ಮವಿರುವ ಕಳಶದ ಮೇಲೆ ಪ್ರತಿಮೆ ಸ್ಥಾಪನೆ

250 ಮಂದಿ ಆಸೀನರಾಗುವ ಸಭಾಂಗಣ, ಕ್ಯಾಂಟೀನ್‌ ವ್ಯವಸ್ಥೆ

ಕೇಂದ್ರ ಸರ್ಕಾರದ ಫಿಲಂ & ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾದ ಶಾಖೆ ಸ್ಥಾಪಿಸಲು ಚಿಂತನೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.