ಮುಂಬೈ: ಮಾದಕ ನಟಿ ಪೂನಂ ಪಾಂಡೆ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಅದು ನಿಜವೋ ಹೌದು ಎಂದು ನೇರವಾಗಿ ಕೇಳಿದಾಗ, ಹಲವು ವಿಚಾರಗಳನ್ನು ಮಾಧ್ಯಮದ ಎದುರು ಪೂನಂ ಪಾಂಡೆ ತೆರೆದಿಟ್ಟಿದ್ದಾರೆ. ‘ನಾನಿನ್ನೂ ಪ್ರೆಗ್ನೆಂಟ್ ಆಗಿಲ್ಲ. ನೀವು ನನ್ನನ್ನು ಬಲವಂತವಾಗಿ ಪ್ರೆಗ್ನೆಂಟ್ ಮಾಡಬೇಡಿ’ ಎಂದು ಗಾಸಿಪ್ ಹಬ್ಬಿಸುವವರಿಗೆ ಪೂನಂ ತಿರುಗೇಟು ನೀಡಿದ್ದಾರೆ.
ಕೆಲವೇ ದಿನಗಳ ಹಿಂದೆ ನಟಿ ಪೂನಂ ಪಾಂಡೆ ಗಂಡ ಸ್ಯಾಮ್ ಬಾಂಬೆ ಜೊತೆ ಪುನಃ ಸಹಜೀವನ ಆರಂಭಿಸಿದ್ದು, ಆ ಬಗ್ಗೆಯೂ ಮಾತನಾಡಿದ್ದು, ‘ನಮ್ಮ ನಡುವಿನ ಜಗಳವನ್ನು ನಾವು ಬಗೆಹರಿಸಿಕೊಂಡಿದ್ದೇವೆ. ನಾನು ನನ್ನ ಮದುವೆಯನ್ನು ಉಳಿಸಿಕೊಂಡಿದ್ದು, ನೀವು ಒಬ್ಬರನ್ನು ನಿಜವಾಗಿಯೂ ಪ್ರೀತಿಸಿದ್ದೇ ಆದರೆ ಅಷ್ಟು ಸುಲಭವಾಗಿ ಬಿಟ್ಟುಕೊಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಇನ್ನು, ಎಲ್ಲರ ಸಂಬಂಧದಲ್ಲೂ ಕೂಡ ತೊಂದರೆ ಎದುರಾಗುತ್ತದೆ ಎಂಬುದು ನನಗೆ ತಿಳಿದಿದೆ. ಆದರೆ ಅದನ್ನು ತಿದ್ದಿಕೊಳ್ಳಲು ಒಂದು ಅವಕಾಶ ಕೊಡಬೇಕಾಗುತ್ತದೆ’ ಎಂದು ಪತಿ ಸ್ಯಾಮ್ ಬಾಂಬೆ ಅವರನ್ನು ಕ್ಷಮಿಸಿರುವುದಾಗಿ ನಟಿ ಪೂನಂ ಪಾಂಡೆ ಹೇಳಿದ್ದಾರೆ.