ಸ್ಯಾಂಡಲ್‌ವುಡ್ ನ ಮೋಹಕ ತಾರೆ ನಟಿ ರಮ್ಯಾ ಅವರು ಗುಡ್ ನ್ಯೂಸ್ ನೀಡಿದ್ದು ಇಂದು ಬೆಳಗ್ಗೆ 11.30ಕ್ಕೆ ಸಿಹಿ ಸುದ್ದಿ ಕೊಡುವುದಾಗಿ ತಿಳಿಸಿದ್ದು, ಈ ಕುರಿತು ಸ್ಯಾಂಡಲ್ ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಹೌದು, ನಟಿ ರಮ್ಯಾ ಆಪ್ತ ಮೂಲಗಳ ಪ್ರಕಾರ ತಮ್ಮದೇ ಆದ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು, ರಾಜ್ ಬಿ ಶೆಟ್ಟಿ ಅವರ ಸಿನಿಮಾದ ಮೂಲಕ ಮೋಹಕ ತಾರೆ ಮತ್ತೆ ಸಿನಿಮಾ ರಂಗಕ್ಕೆ ಕಮ್ಬ್ಯಾಕ್ ಆಗಲಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ, ರಾಜ್ ಬಿ ಶೆಟ್ಟಿ ಅವರು ರಮ್ಯಾಗಾಗಿ ಯಾವುದೇ ಸಿನಿಮಾ ಮಾಡುತ್ತಿಲ್ಲ ಎನ್ನುವ ಮಾಹಿತಿಯೂ ಇದೆ.
ಇನ್ನು, ರಮ್ಯಾ ಹೊಸ ಸಿನಿಮಾ ಮಾಡ್ತಾರಾ? ಮದುವೆ ಬಗ್ಗೆ ಏನಾದರೂ ನಿರ್ಧಾರಾ ತೆಗೆದುಕೊಂಡಿದ್ದಾರಾ, ನಿರ್ಮಾಣ ಸಂಸ್ಥೆ ಶುರು ಮಾಡ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದ್ದು, ಇಂದು ಈ ಎಲ್ಲಾ ಉಹಾ ಪೋಹಗಳಿಗೆ ತೆರೆ ಬೀಳಲಿದೆ ಎನ್ನಲಾಗಿದೆ.