ಮುಂಬೈ: ಬಾಲಿವುಡ್ನ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ‘ಧುರಂಧರ್-2’ (Dhurandhar 2) ಚಿತ್ರದ ಟ್ರೇಲರ್ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ರಣವೀರ್ ಸಿಂಗ್ ಹಿಂದೆಂದೂ ಕಾಣದ ಭೀಕರ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸಿನೆಮಾ ಪ್ರೇಮಿಗಳಲ್ಲಿ ಕುತೂಹಲ ದುಪ್ಪಟ್ಟುಗೊಳಿಸಿದೆ.
ಟ್ರೇಲರ್ ಹೈಲೈಟ್ಸ್:
ಮಾಸ್ ಎಂಟ್ರಿ: ಟ್ರೇಲರ್ನಲ್ಲಿ ರಣವೀರ್ ಸಿಂಗ್ ಅವರ ಪವರ್ಫುಲ್ ಡೈಲಾಗ್ಸ್ ಮತ್ತು ಹೈ-ವೋಲ್ಟೇಜ್ ಆ್ಯಕ್ಷನ್ ದೃಶ್ಯಗಳು ನೋಡುಗರನ್ನು ಮೈನವಿರೇಳಿಸುವಂತಿವೆ.
ಬಹುಭಾಷಾ ಬಿಡುಗಡೆ: ಈ ಬಾರಿ ಚಿತ್ರವು ಕೇವಲ ಹಿಂದಿಗೆ ಸೀಮಿತವಾಗದೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಏಕಕಾಲಕ್ಕೆ ತೆರೆಕಾಣಲಿದೆ.
ರಿಲೀಸ್ ದಿನಾಂಕ: ಚಿತ್ರವು ಇದೇ ಮಾರ್ಚ್ 19 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
1350 ಕೋಟಿ ಕ್ಲಬ್ ಸೇರಿದ ಮೊದಲ ಭಾಗ:
‘ಧುರಂಧರ್’ ಸರಣಿಯ ಮೊದಲ ಭಾಗವು ಬಾಕ್ಸ್ ಆಫೀಸ್ನಲ್ಲಿ ಅಕ್ಷರಶಃ ಧೂಳೆಬ್ಬಿಸಿತ್ತು. ಜಾಗತಿಕವಾಗಿ ಬರೋಬ್ಬರಿ 1,350 ಕೋಟಿ ರೂ. ಗಳಿಸುವ ಮೂಲಕ ಭಾರತೀಯ ಸಿನೆಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿತ್ತು. ಈಗ ಎರಡನೇ ಭಾಗದ ಟ್ರೇಲರ್ ನೋಡಿದರೆ, ಈ ಚಿತ್ರವು ಮೊದಲ ಭಾಗದ ದಾಖಲೆಯನ್ನು ಮುರಿಯುವುದು ಖಚಿತ ಎಂದು ಗಾಂಧಿನಗರದ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.



