ಬೆಂಗಳೂರು : ಕನ್ನಡದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇಂದು ಬೆಳ್ಳಂಬೆಳಿಗ್ಗೆ ತಮ್ಮ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ್ದಾರೆ. ದೃವ ಸರ್ಜಾ ಅವರು ಬೆಂಗಳೂರಿನ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಚಿತ್ರತಂಡದ ಜೊತೆ ತಮ್ಮ ಹೊಸ ಚಿತ್ರದ ಮುಹೂರ್ತ ನೆರವೇರಿಸಿದ್ದಾರೆ.
‘ದುಬಾರಿ’ ಎಂಬ ಟೈಟಲ್ನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದ್ದು, ನಿರ್ದೇಶಕ ನಂದಕಿಶೋರ್ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಧ್ರುವ ಸರ್ಜಾ ಅವರು, ಇದು ನನ್ನ ಐದನೇ ಚಿತ್ರ. ಸಿನಿಮಾ ಹೆಸರು ‘ದುಬಾರಿ’ ಎಂದು ಹೇಳಿದ್ದಾರೆ.
ಇದಕ್ಕೂ ಮುಂಚೆ ದೃವ ಸರ್ಜಾ ಅವರು ಅದ್ದೂರಿ, ಬಹಾದ್ದೂರ್ ಹಾಗು ಭರ್ಜರಿ ಸಿನಿಮಾಗಳನ್ನು ಮಾಡಿದ್ದೂ, ಈ 3 ಬಾಕ್ಸ್ ಆಫಿಸ್ ದೂಳೆಬ್ಬಿಸಿದ್ದವು. ಇನ್ನು ತಮ್ಮ ನಾಲ್ಕನೇ ಸಿನಿಮಾ ಪೋಗುರು ಚಿತ್ರೀಕರಣದ ಹಂತದಲ್ಲಿದ್ದು ಇನ್ನೇನು ತೆರೆಗೆ ಬರಲು ಸಿದ್ದವಾಗಿದ್ದು, ಈಗ ಐದನೇ ಸಿನಿಮಾ ‘ದುಬಾರಿ’ ಎಂದು ಹೇಳಿದ್ದಾರೆ.
5th movie name is
💴 DUBARI 💵
ಜೈ ಆಂಜನೇಯ 💪🏼 pic.twitter.com/7V4htHW5KS— Dhruva Sarja (@DhruvaSarja) November 6, 2020