ಬೆಂಗಳೂರು: ಕನ್ನಡ ಚಿತ್ರರಂಗದ ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನಾ ನಾಗರಾಜ್ ಅವರು ‘ಲವ್ ಮಾಕ್ಟೇಲ್’ ಸಿನಿಮಾವನ್ನು ಒಟ್ಟಿಗೆ ಮಾಡಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ಈ ಸಿನಿಮಾ ನಂತರ ಇಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಈ ರಿಯಲ್ ಲೈಫ್ ಜೋಡಿ ಯಾವಾಗ ಮದುವೆಯಾಗಲಿದ್ದಾರೆ ಎಂದು ಎಲ್ಲರಲ್ಲಿ ನಿರೀಕ್ಷೆ ಮೂಡಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನಾ ನಾಗರಾಜ್ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದು, 14 ಫೆಬ್ರವರಿ 2021ಕ್ಕೆ ನಮ್ಮ ಮದುವೆ, ನಮ್ಮನ್ನು ಆಶೀರ್ವದಿಸಿ ಎಂದು ಈ ತಾರಾಜೋಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ನಟ ದಿಗಂತ್ ಮತ್ತು ಐಂದ್ರಿತಾ ರೈ ಜೋಡಿ ಬಳಿಕ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನಾ ನಾಗರಾಜ್ ಜೋಡಿ ಚಂದನವನದ ಪ್ರಣಯಪಕ್ಷಿಗಳೆಂದು ಹೆಸರಾಗಿದ್ದರು. ಸದ್ಯ ನಟ ಡಾರ್ಲಿಂಗ್ ಕೃಷ್ಣ ಅವರು ಲೋಕಲ್ ಟ್ರೈನ್, ಶುಗರ್ ಫ್ಯಾಕ್ಟರಿ ಹಾಗು ವರ್ಜಿನ್ ಸಿನಿಮಾದಲ್ಲಿ ನಟಿಸುತ್ತಿದ್ದು, ತಾವೇ ನಿರ್ದೇಶನ ಮಾಡಿ ನಟಿಸಿದ್ದ ‘ಲವ್ ಮಾಕ್ಟೇಲ್’ ಸೀಕ್ವೆಲ್ ‘ಲವ್ ಮಾಕ್ಟೇಲ್-2 ಸಿನಿಮಾವನ್ನು ನಟಿಸಿ ನಿರ್ದೇಶನ ಮಾಡುತ್ತಿದ್ದು ತಾವೇ ಸ್ವತಃ ನಿರ್ಮಾಣ ಮಾಡುತ್ತಿದ್ದಾರೆ.
ನಮ್ಮ ಮದುವೆ 14 ಫೆಬ್ರವರಿ 2021, ನಮ್ಮನ್ನು ಆಶೀರ್ವದಿಸಿ
I am happy to announce that, We are getting married on Feb 14th 2021, Bless us pic.twitter.com/Ey3VfIJKr0— darling krishna (@darlingkrishnaa) November 3, 2020