ಹೆಣ್ಣುಮಕ್ಕಳಿಗೆ ಬೆತ್ತಲಾಗಲು ಹೇಳಿದ್ದ BigBoss​ ಸ್ಪರ್ಧಿ; ಮಹಿಳಾ ಆಯೋಗದ ಅಧ್ಯಕ್ಷೆಗೆ ಅತ್ಯಾಚಾರ ಬೆದರಿಕೆ..!

ನಿರ್ದೇಶಕ, ಬಿಗ್​ಬಾಸ್​ ಸ್ಪರ್ಧಿ ಸಾಜಿದ್​ ಖಾನ್​ ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡಲು ಅಪ್ರಾಪ್ತ ಹುಡುಗಿಯರಿಗೆ ಆಡಿಷನ್​ಗಳಲ್ಲಿ ಬೆತ್ತಲಾಗುವಂತೆ ಹೇಳಿದ್ದರು ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಗಂಭೀರ ಆರೋಪ ಮಾಡಿದ್ದಾರೆ. ಈ…

Maliwal has accused Bigg Boss contestant Sajid Khan

ನಿರ್ದೇಶಕ, ಬಿಗ್​ಬಾಸ್​ ಸ್ಪರ್ಧಿ ಸಾಜಿದ್​ ಖಾನ್​ ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡಲು ಅಪ್ರಾಪ್ತ ಹುಡುಗಿಯರಿಗೆ ಆಡಿಷನ್​ಗಳಲ್ಲಿ ಬೆತ್ತಲಾಗುವಂತೆ ಹೇಳಿದ್ದರು ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಮೀಟೂ ಅಭಿಯಾನ’ದ ವೇಳೆ ನಿರ್ದೇಶಕ ಮತ್ತು ಬಿಗ್​ಬಾಸ್ ಸ್ಪರ್ಧಿ ಸಾಜಿದ್ ಖಾನ್ ವಿರುದ್ಧ ಹತ್ತು ಮಹಿಳೆಯರು ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿದ್ದರು. ಸಾಜಿದ್ ಖಾನ್ ತಮ್ಮ ಹೌಸ್‌ಫುಲ್ 4 ಮತ್ತು ಹಮ್‌ಶಕಲ್ಸ್ ಸಿನಿಮಾಗಳಲ್ಲಿ ಅವಕಾಶ ನೀಡಲು ಆಡಿಷನ್‌ ಸಮಯದಲ್ಲಿ ಅಪ್ರಾಪ್ತ ಹುಡುಗಿಯರಿಗೆ ಬೆತ್ತಲೆಯಾಗುವಂತೆ ಹೇಳಿದ್ದರು ಎಂದೂ ಸ್ವಾತಿ ಸಂಚಲನ ಹೇಳಿಕೆ ನೀಡಿದ್ದಾರೆ.

ಸಾಜಿದ್ ಖಾನ್ ಅನ್ನು ಬಿಗ್ ಬಾಸ್ ಶೋನಿಂದ ತೆಗೆದು ಹಾಕುವಂತೆ ಪಟ್ಟು ಹಿಡಿದಿರುವ ಸ್ವಾತಿ ಮಲಿವಾಲ್, ಬಿಗ್ ಬಾಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಎಲ್ಲ ದೂರುಗಳ ತನಿಖೆ ನಡೆಸುವಂತೆ ನಾನು ಸಚಿವ ಅನುರಾಗ್ ಠಾಕೂರ್ ಅವರಿಗೆ ದೂರು ಸಲ್ಲಿಸಿದ್ದೇನೆ. ನನ್ನ ದೂರಿನ ಕುರಿತಾಗಿ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ನಾನು ಈ ವಿಚಾರದ ಬಗ್ಗೆ ಧ್ವನಿ ಎತ್ತಿದ ಮೇಲೆ ಅತ್ಯಾಚಾರ ಬೆದರಿಕೆಗಳನ್ನು ಸ್ವೀಕರಿಸುತ್ತಿದ್ದೇನೆ ಎಂದಿದ್ದು, ಸಾಜಿದ್​ ಅವರನ್ನು ಕೂಡಲೇ ಬಿಗ್‌ಬಾಸ್‌ನಿಂದ ಹೊರಗೆ ಕಳುಹಿಸಬೇಕು’ ಎಂದು ಸ್ವಾತಿ ಆಗ್ರಹಿಸಿದ್ದಾರೆ.

Vijayaprabha Mobile App free

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.