ನಿಶ್ಚಿತಾರ್ಥ ನಂತರ ಮಾಜಿ ಸಿಎಂ ಮೊಮ್ಮಗನೊಂದಿಗೆ ಬ್ರೇಕಪ್; ಸಂಚಲನ ನಿರ್ಧಾರ ಕೈಗೊಂಡ ಖ್ಯಾತ ನಟಿ!

ದಕ್ಷಿಣ ಭಾರತದ ಖ್ಯಾತ ನಟಿ ಮೆಹ್ರೀನ್ ಫಿರ್ಜಾದ ಶಾಕಿಂಗ್ ನಿರ್ಧಾರ ಕೈಗೊಂಡಿದ್ದು, ಹರಿಯಾಣ ಮಾಜಿ ಸಿಎಂ ಭಜನ್ ಲಾಲ್ ಅವರ ಮೊಮ್ಮಗ, ಯುವ ಮುಖಂಡ ಭವ್ಯಾ ಭೀಷ್ನೊಯ್ ಅವರೊಂದಿಗಿನ ನಿಶ್ಚಿತಾರ್ಥವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದ್ದಾರೆ. ಮಾರ್ಚ್…

ದಕ್ಷಿಣ ಭಾರತದ ಖ್ಯಾತ ನಟಿ ಮೆಹ್ರೀನ್ ಫಿರ್ಜಾದ ಶಾಕಿಂಗ್ ನಿರ್ಧಾರ ಕೈಗೊಂಡಿದ್ದು, ಹರಿಯಾಣ ಮಾಜಿ ಸಿಎಂ ಭಜನ್ ಲಾಲ್ ಅವರ ಮೊಮ್ಮಗ, ಯುವ ಮುಖಂಡ ಭವ್ಯಾ ಭೀಷ್ನೊಯ್ ಅವರೊಂದಿಗಿನ ನಿಶ್ಚಿತಾರ್ಥವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದ್ದಾರೆ. ಮಾರ್ಚ್ 2021 ರಲ್ಲಿ ನಟಿ ಮೆಹ್ರೀನ್-ಭವ್ಯಾ ಭೀಷ್ನೊಯ್ ಅವರ ನಿಶ್ಚಿತಾರ್ಥ ಜೈಪುರದಲ್ಲಿ ನಡೆಡಿದ್ದು ಎಲ್ಲರಿಗೂ ತಿಳಿದ ವಿಷಯ.

ಆದರೆ, ಈಗ ನಿಶ್ಚಿತಾರ್ಥವನ್ನು ರದ್ದುಗೊಳಿಸಿದ್ದು ನಾವು ಬೇರ್ಪಡುತ್ತಿದ್ದೇವೆ ಎಂದು ನಟಿ ಮೆಹ್ರೀನ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಇಬ್ಬರೂ ಒಟ್ಟಿಗೆ ಸೇರಿ ಸೌಹಾರ್ದಯುತವಾಗಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಮೆಹ್ರೀನ್ ತಿಳಿಸಿದ್ದು, ಭವ್ಯ ಬಿಷ್ಣೋಯ್ ಹಾಗು ಅವರ ಕುಟುಂಬ ಸದಸ್ಯರೊಂದಿಗೆ ಇನ್ನು ಮುಂದೆ ಯಾವುದೇ ಸಂಬಂಧವಿಲ್ಲ ಎಂದು ಮೆಹ್ರೀನ್ ಬಹಿರಂಗಪಡಿಸಿದ್ದಾರೆ.

Vijayaprabha Mobile App free

ಇನ್ನು ಮುಂದೆ ಸಿನೆಮಾಗಳತ್ತ ತನ್ನ ಗಮನ ಹರಿಸುವುದಾಗಿ ಸ್ಪಷ್ಟತೆ ನೀಡಿದ್ದು, ತನ್ನ ಈ ನಿರ್ಧಾರವನ್ನು ಗೌರವಿಸಿ ಅಭಿಮಾನಿಗಳನ್ನು ರಂಜಿಸುವುದಾಗಿ ಮೆಹ್ರೀನ್ ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ತೆಲುಗಿನ ಎಫ್ 2 ಸಿನಿಮಾದ ಸೀಕ್ವೆಲ್ ಎಫ್ 3 ನಲ್ಲಿ ನಟಿಸುತ್ತಿರುವ ಮೆಹ್ರೀನ್ ಈ ಹಿಂದೆ ‘ಕೃಷ್ಣಗಾಡಿ ವೀರಪ್ರೇಮ ಗಥಾ’, ‘ಮಹಾನುಭಾವುಡು’ ಮತ್ತು ‘ರಾಜಾ ದಿ ಗ್ರೇಟ್’ ಚಿತ್ರಗಳಲ್ಲಿ ನಟಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.