ಮಾಜಿ ವಿಶ್ವ ಸುಂದರಿ ನಟಿ ಸುಶ್ಮಿತಾ ಸೇನ್ ಹಾಗೂ ಲಲಿತ್ ಮೋದಿ ಜೋಡಿ ಇತ್ತೀಚೆಗೆ ಡೇಟಿಂಗ್ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿತ್ತು. ಆದರೀಗ ಇಬ್ಬರು ನಡುವೆ ಬ್ರೇಕಪ್ ಆಗಿದೆ ಎನ್ನಲಾಗುತ್ತಿದೆ.
ಹೌದು, ಲಲಿತ್ ಮೋದಿ ಟ್ವೀಟ್ ಮೂಲಕ ಸುಶ್ಮಿತಾ ಸೇನ್ ಜೊತೆಗಿನ ಸಂಬಂಧವನ್ನು ಬಹಿರಂಗ ಪಡಿಸಿದ ನಂತರ ಚಿತ್ರರಂಗದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು. ಲಿತ್ ಮೋದಿ ಬಹಿರಂಗವಾಗಿಯೇ ಸುಶ್ಮಿತಾ ಫೋಟೋ ಶೇರ್ ಮಾಡಿ ಪ್ರೀತಿ ವಿಚಾರ ಹಂಚಿಕೊಂಡಿದ್ದು, ಮಾಜಿ ವಿಶ್ವಸುಂದರಿ ಜೊತೆಗಿನ ಲಲಿತ್ ಮೋದಿಯ ರೊಮ್ಯಾಂಟಿಕ್ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು.
ಆದರೆ, ಈಗ ಲಲಿತ್ ಮೋದಿ ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ಸುಶ್ಮಿತಾ ಹೆಸರನ್ನು ತೆಗೆದು ಹಾಕಿದ್ದಾರೆ. ಆಕೆಯ ಜೊತೆಗಿರುವ ಫೋಟೋದ ಡಿಪಿಯನ್ನೂ ಬದಲಾಯಿಸಲಾಗಿದೆ. ಅಂದಹಾಗೆ ಸುಶ್ಮಿತಾ ಸೇನ್ ಬಗ್ಗೆ ಹಾಕಿದ್ದ ದೀರ್ಘವಾದ ಪೋಸ್ಟ್ ಮಾತ್ರ ಇನ್ನು ಹಾಗೆ ಇದ್ದು, ಲಲಿತ್ ಮೋದಿ ಅವರ ಅವರ ಈ ನಡೆ ಇಬ್ಬರ ನಡುವಿನ ಬ್ರೇಕಪ್‌ಗೆ ಪುಷ್ಠಿ ನೀಡಿದೆ.
ಇನ್ನು, ಇಬ್ಬರ ನಡುವೆ ಜಗಳವಾಗಿರುವುದು ಸ್ಪಷ್ಟವಾಗಿದೆ ನೆಟ್ಟಿಗರು ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ಇತ್ತೀಚಿಗೆ ನಟಿ ಸುಶ್ಮಿತಾ ಸೇನ್ ತನ್ನ ಮಾಜಿ ಗೆಳೆಯ ರೋಹ್ಮನ್ ಜೊತೆ ಕಾಣಿಸಿಕೊಂಡಿದ್ದಳು. ಹೌದು, ಮಾಜಿ ಪ್ರಿಯಕರನ ಜೊತೆ ಸಿನಿಮಾ, ಶಾಪಿಂಗ್ ಅಂತ ಸುತ್ತಾಡುತ್ತಿರುವುದು ನೋಡಿ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದರು.