‘ಪೊಗರು’ ಚಿತ್ರದಲ್ಲಿ ಅರ್ಚಕ-ಪುರೋಹಿತರ ಅವಹೇಳನ; ಬ್ರಾಹ್ಮಣರಿಂದ ಪ್ರತಿಭಟನೆಯಾ ಎಚ್ಚರಿಕೆ: ಸಂಕಷ್ಟದಲ್ಲಿ ಪೊಗರು ಸಿನಿಮಾ

ಬೆಂಗಳೂರು: ನಟ ದ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು’ ಚಿತ್ರ ಬಿಡುಗಡೆಗೊಂಡು ರಾಜ್ಯದಾತ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ‘ಪೊಗರು’ ಚಿತ್ರದಲ್ಲಿ ಅರ್ಚಕರು ಹಾಗೂ ಪುರೋಹಿತರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಲಾಗಿದ್ದು ಇದು…

Pogaru-vijayaprabha-news

ಬೆಂಗಳೂರು: ನಟ ದ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು’ ಚಿತ್ರ ಬಿಡುಗಡೆಗೊಂಡು ರಾಜ್ಯದಾತ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಈ ನಡುವೆ ‘ಪೊಗರು’ ಚಿತ್ರದಲ್ಲಿ ಅರ್ಚಕರು ಹಾಗೂ ಪುರೋಹಿತರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಲಾಗಿದ್ದು ಇದು ಖಂಡನೀಯ. ಯಾವುದೇ ಜಾತಿ ಧರ್ಮವನ್ನು ಅವಹೇಳನಕಾರಿಯಾಗಿ ತೋರಿಸುವುದು ಸರಿಯಲ್ಲ, ಇದರಿಂದ ಸಾಮಾಜಿಕ ಸ್ವಾಸ್ತ್ಯ ಹಾಳುಮಾಡಿದಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಹೇಳಿದ್ದಾರೆ.

ಇದರಿಂದ ರಾಜ್ಯದಾತ್ಯಂತ ಇರುವ ಅರ್ಚಕರು ಹಾಗೂ ಪುರೋಹಿತರು ಬೇಸರಗೊಂಡಿದ್ದು, ತಕ್ಷಣವೇ ‘ಪೊಗರು’ ಚಿತ್ರದಲ್ಲಿನ ಈ ದೃಶ್ಯವನ್ನು ತೆಗೆದುಹಾಕಿ, ನಿರ್ಮಾಪಕರು ಮತ್ತು ನಿರ್ದೇಶಕರು ಬ್ರಾಹ್ಮಣರ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಗುವುದು ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಅವರು ಎಂದು ಎಚ್ಚರಿಕೆ ನೀಡಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.