ಮುಂಬೈ: ಅನೇಕ ಸೆಲೆಬ್ರಿಟಿಗಳು,ನಟ, ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿರುತ್ತಾರೆ. ಅವರು ತಮ್ಮ ಬಗ್ಗೆ ಎಲ್ಲವನ್ನೂ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ, ಸಾರ್ವಜನಿಕರ ಸಾಮಾಜಿಕ ಮಾಧ್ಯಮ ಖಾತೆಗಳ ಜೊತೆ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಖಾತೆಗಳು ಹ್ಯಾಕ್ ಆಗುತ್ತಿರುತ್ತವೆ. ಅನೇಕ ಸೆಲೆಬ್ರಿಟಿಗಳು ಸಹ ಈ ಸಮಸ್ಯೆಯನ್ನು ಎದುರಿಸಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟಿ ಇಶಾ ಡಿಯೋಲ್ ಅವರ ಇನ್ಸ್ಟಾಗ್ರಾಮ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಅವರು ತಮ್ಮ ಟ್ವಿಟ್ಟರ್ನಲ್ಲಿ ಸ್ವತಃ ತಿಳಿಸಿದ್ದಾರೆ.ನಟಿ ಇಶಾ ಡಿಯೋಲ್ ಅವರು ಟ್ವೀಟ್ ಮಾಡಿ, ತನ್ನ ಪ್ರೊಫೈಲ್‌ನಿಂದ ಯಾವುದೇ ಸಂದೇಶಗಳು ಅಥವಾ ಪೋಸ್ಟ್‌ಗಳು ಬಂದರೆ ಪ್ರತಿಕ್ರಿಯಿಸದಂತೆ ಅವರ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರು ತಮ್ಮ ಟ್ವಿಟ್ಟರ್ನಲ್ಲಿ ಹಲವಾರು ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿಗೆ ಆಶಾ ಭೋಸ್ಲೆ, ಊರ್ಮಿಳಾ ಮಾತೋಂಡ್ಕರ್, ಸುಸ್ಸೇನ್ ಖಾನ್, ವಿಕ್ರಮ್ ಮಾಸ್ಸಿ ಮತ್ತು ಫರಾಹ್ ಖಾನ್ ಅವರಂತಹ ಪ್ರಸಿದ್ಧ ವ್ಯಕ್ತಿಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಮಾಡಲಾಗಿತ್ತು.
This morning my official Instagram account imeshadeol got Hacked , so please don’t reply to any msg if you received any from my Instagram account. Sorry for the inconvenience.
Insta Id : imeshadeol pic.twitter.com/AbLg79WxIY— Esha Deol (@Esha_Deol) January 10, 2021