Lawyer Jagadish : ಲಾಯರ್ ಎಂದೇ ಫೇಮಸ್ ಆಗಿರುವ ಜಗದೀಶ್ ಅವರನ್ನು ನಂಬಬೇಡಿ, ವಕೀಲ ಅಲ್ಲದವರನ್ನು ವಕೀಲ ಎಂದು ಬಿಂಬಿಸಬೇಡಿ ಎಂದು ಬೆಂಗಳೂರು ವಕೀಲರ ಸಂಘ ಕಲರ್ಸ್ ಕನ್ನಡ ವಾಹಿನಿಗೆ ಪತ್ರ ಬರೆದು ಕೇಳಿಕೊಂಡಿದೆ.
ಹೌದು, ಬಿಗ್ ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋ ಸ್ಪರ್ಧಿ ಆಗಿರುವ ಜಗದೀಶ್ ಅವರು ನಿಜಕ್ಕೂ ಲಾಯರ್ ಹೌದೋ ಅಲ್ಲವೋ ಎಂಬ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಅದಕ್ಕೆ ಸಂಬಂಧಿಸಿದಂತೆ ‘ವಕೀಲರ ಸಂಘ, ಬೆಂಗಳೂರು’ ವತಿಯಿಂದ ಕಲರ್ಸ್ ಕನ್ನಡ ವಾಹಿನಿಗೆ ಒಂದು ಪತ್ರ ಬರೆಯಲಾಗಿದೆ.
ಇದನ್ನೂ ಓದಿ: Manju Pavagada Engagement: ನಿಶ್ಚಿತಾರ್ಥ ಮಾಡಿಕೊಂಡ ಮಂಜು ಪಾವಗಡ!
ಪತ್ರದಲ್ಲಿ, ಕೆಎನ್ ಜಗದೀಶ್ ಅವರು ವಕೀಲರಲ್ಲದಿದ್ದರೂ ಸಹ ಬಿಗ್ ಬಾಸ್-11ರ ಕಾರ್ಯಕ್ರಮದಲ್ಲಿ ಅವರನ್ನು ವಕೀಲರು ಮತ್ತು ವಕೀಲ್ ಸಾಹೇಬ್ ಎಂದು ಬಿಂಬಿಸುತ್ತಿರುವುದು ನಮ್ಮ ವಕೀಲರ ಸಂಘದ ಸದಸ್ಯರಿಗೆ ನೋವುಂಟು ಮಾಡಿದೆ. ಇದಕ್ಕೆ ಅನೇಕ ವಕೀಲರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಲಾಗಿದೆ.




