Bigg Boss Kannada Season 11 : ಬಿಗ್ ಬಾಸ್ ಮನೆಯಲ್ಲಿ ನಿಯಮ ಪಾಲಿಸದ ಲಾಯರ್ ಜಗದೀಶ್‌ಗೆ ಕಿಚ್ಚ ಸುದೀಪ್ ಚಳಿ ಬಿಡಿಸಿದ್ದಾರೆ. ಹೆಣ್ಣು ಮಕ್ಕಳ ಒಳ ಉಡುಪಿನ ಬಗ್ಗೆ ಮಾತನಾಡಿದ್ದಕ್ಕೆ ಗರಂ ಆಗಿದ್ದಾರೆ. ‘ಬಿಗ್‌ಬಾಸ್‌ಗೆ ಚಾಲೆಂಜ್ ಮಾಡೋದು ತಪ್ಪಲ್ಲ, ಅದೊಂದು ಕಾಮಿಡಿ’ ಎಂದು ತಿವಿದಿದ್ದಾರೆ.
‘ಜಗದೀಶ್ ಹೆಣ್ಮಕ್ಕಳ ಮುಂದೆ ಬಟ್ಟೆ ಬದಲಿಸ್ತಾರೆ. ಡ್ರೆಸ್ಸಿಂಗ್ ರೂಮ್ನಲ್ಲಿ ಬಟ್ಟೆ ಬದಲಿಸಿ ಅಂದ್ರು ಕೇಳಲ್ಲ. ಹೆಣ್ಮಕ್ಕಳು ಇದ್ದಾರೆ ಅಂತ ಗೊತ್ತಿದ್ರು, ಅರೆ-ಬರೆ ಬಟ್ಟೆಯಲ್ಲಿ ಓಡಾಡ್ತಾರೆ’ ಎಂದು ಹಂಸ ದೂರು ನೀಡಿದ್ದಾರೆ.
ಹದ್ದು ಮೀರಿದ ಜಗದೀಶ್.. ಮಹಿಳೆಯರ ಒಳ ಉಡುಪಿನ ಬಗ್ಗೆ ಮಾತು!
ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಅತಿರೇಕ ಮುಂದುವರೆದಿದ್ದು ಮಹಿಳೆಯರ ಒಳ ಉಡುಪಿನ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಉಗ್ರಂ ಮಂಜುಗೆ ಜಗದೀಶ್ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇದಕ್ಕೆಲ್ಲ ಮಂಜು ‘ಬ್ರೋ’ ಎಂದಷ್ಟೇ ಉತ್ತರಿಸಿದ್ದಾರೆ.
ಕೆರಳಿದ ಜಗದೀಶ್ ‘ಬ್ರೋ ಪ್ಯಾಂಟೀಸ್ ಎಲ್ಲ ನೋಡಿದ್ದೀನಿ. ನನ್ನ ಹೆಂಡತಿ ಹಾಕೋದು ಇದನ್ನೇ’ ಎಂದಿದ್ದಾರೆ. ಇದರಿಂದ ಹೆಣ್ಮಕ್ಕಳಿಗೆ ಮುಜುಗರವಾಗಿದೆ. ‘ಇನ್ಸೆಕ್ಯೂರ್ ಫೀಲ್ ಆಗ್ತಿದೆ. ಏನಾದರೂ ನಿರ್ಧಾರ ತಗೊಳ್ಳಿ’ ಎಂದು ಭವ್ಯಾ ಮನವಿ ಮಾಡಿದ್ದಾರೆ.