ಬಾಲಿವುಡ್ ಐಟಂ ಬಾಂಬ್ ರಾಖಿ ಸಾವಂತ್ ಅವರು ತಮ್ಮ ಪತಿ ರಿತೇಶ್ ಗೆ ವಿಚ್ಛೇದನ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದ್ದು, ಎಲ್ಲರಿಗು ತಿಳಿದ ವಿಷಯ. ಪ್ರೇಮಿಗಳ ದಿನದಂದು ರಾಖಿ ಸಾವಂತ್ ನೀಡಿದ ಈ ಹೇಳಿಕೆಯಿಂದ ಎಲ್ಲರೂ ಶಾಕ್ ಆಗಿದ್ದರು. ಬಿಗ್ ಬಾಸ್ ಕಾರ್ಯಕ್ರಮದ ನಂತರ ಹಲವು ಘಟನೆಗಳು ನಡೆದಿದ್ದು, ಕೆಲವನ್ನು ಪರಿಹರಿಸುವ ಸ್ಥಿತಿಯಲ್ಲಿ ಇಲ್ಲದ ಕಾರಣ ಪತಿ ರಿತೇಶ್ ಜೊತೆ ಬ್ರೇಕ್ ಅಪ್ ಆಗುತ್ತಿರುವುದಾಗಿ ರಾಖಿ ಸಾವಂತ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಬಹಿರಂಗಪಡಿಸಿದ್ದರು. ಇದರೊಂದಿಗೆ ಈ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಯಿಗಿತ್ತು.
ಬಹಿರಂಗವಾಗಿ ರೊಮ್ಯಾನ್ಸ್ ಮಾಡುವುದು, ಲಿಪ್ ಕಿಸ್ ಮಾಡಿಕೊಳ್ಳುತ್ತಿದ್ದ ಈ ಜೋಡಿ ಸದ್ಯ ಯಾಕೆ ಬೇರೆಯಾಗುತ್ತಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಬಿಗ್ ಬಾಸ್ ನಂತರ ಪತಿ ರಿತೇಶ್ ತನ್ನನ್ನು ತಪ್ಪಿಸುತ್ತಿದ್ದಾರೆ ಮತ್ತು ರಿತೇಶ್ ತನ್ನೊಂದಿಗೆ ಬಹಳ ಕಡಿಮೆ ಸಮಯವನ್ನು ಕಳೆದಿದ್ದಾರೆ ಎಂದು ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬರುವವರೆಗೂ ಆತನಿಗೆ ಮೊದಲೇ ಮದುವೆಯಾಗಿರುವುದು ಗೊತ್ತಿರಲಿಲ್ಲ ಎಂದಿದ್ದಾರೆ. ರಿತೇಶ್ ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡದೆ ತನ್ನನ್ನು ಮರುಮದುವೆ ಮಾಡಿಕೊಂಡಿದ್ದರಿಂದ ಅದು ಕಾನೂನುಬದ್ಧವಾಗಿ ಮಾನ್ಯವಾಗಿಲ್ಲ ಎಂದು ರಾಖಿ ಸಾವಂತ್ ಹೇಳಿದ್ದಾರೆ.
ಇನ್ನು, ನಾವು 2022 ರಲ್ಲಿ ಮಗುವನ್ನು ಪಡೆಯಲು ಯೋಚಿಸಿದ್ದೆವು. ಆದರೆ ಆ ಭರವಸೆಗಳೆಲ್ಲವೂ ಹುಸಿಯಾಯಿತು. ಹೃದಯ ಒಡೆದಿದೆ ಎಂದು ಭಾವುಕರಾಗಿದ್ದಾರೆ ರಾಖಿ ಸಾವಂತ್ ಹೇಳಿದ್ದಾರೆ. ಆದರೆ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಕಾನೂನು ವಿವಾದ ಇತ್ಯರ್ಥಪಡಿಸಿದರೆ ರಿತೇಶ್ ಅವರನ್ನು ಮತ್ತೆ ಭೇಟಿಯಾಗುವುದಾಗಿ ರಾಖಿ ಸಾವಂತ್ ಹೇಳಿದ್ದಾರೆ. ಇಲ್ಲದಿದ್ದಲ್ಲಿ ಸ್ವಂತ ಮನೆ, ಕಾರು ಹೊಂದುವಂತೆಯೂ ರಾಖಿ ಕಂಡಿಷನ್ ಹಾಕಿದ್ದಾಳೆ. ಆದರೆ, ರಿತೇಶ್-ರಾಖಿ ಸಾವಂತ್ ವಿಚ್ಛೇದನ ವಿಚಾರ ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.