ಬೆಂಗಳೂರು: ಕರೋನಾ ಸೋಂಕಿನ ಆತಂಕ ದೂರವಾಗುತ್ತಿದ್ದಂತೆ ಚಿತ್ರ ರಸಿಕರಿಗೆ ಒಂದಾದ ಮೇಲೊಂದು ಸಿಹಿ ಸುದ್ದಿಗಳು ಸಿಗುತ್ತಿದ್ದು, ಕಾಮಿಡಿ ಕಿಂಗ್ ನಟ ಶರಣ್ ಅಭಿನಯದ ಅವತಾರ್ ಪುರುಷ ಚಿತ್ರ ತಂಡ ದೀಪಾವಳಿಗೂ ಮೊದಲೆ ಸಿನಿ ರಸಿಕರಿಗೆ ಸರ್ಪ್ರೈಜ್ ಕೊಡಲು ಸಿದ್ಧವಾಗಿದೆ.
ಚಿತ್ರ ತಂಡದಿಂದ ಮತ್ತೊಂದು ಅಚ್ಚರಿ!; ಕೆ ಜಿ ಎಫ್ ಹಾದಿ ತುಳಿದ ಅವತಾರ ಪುರುಷ:
ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಿತ್ರದಂತೆಯೇ ಅವತಾರ ಪುರುಷ ಚಿತ್ರ ಕೂಡ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದ್ದು, ಅದೆನಾದರು ನಿಜವಾದರೆ ಶರಣ್ ವೃತ್ತಿ ಬದುಕಿನ ಅತಿ ಹೆಚ್ಚು ಬಜೆಟ್ ನ ಚಿತ್ರ ಇದಾಗಲಿದೆ.
![]()
ದೀಪಾವಳಿಗೂ ಮೊದಲೆ ಅವತಾರ ಪುರುಷ ಚಿತ್ರತಂಡ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಲ್ಲಿದ್ದು, ಸಿನಿಮಾ ಪ್ರಚಾರದ ಕಾವನ್ನ ನಿಧಾನವಾಗಿ ಹೆಚ್ಚಿಸಿಕೊಳ್ಳುತ್ತಿದೆ.
ನಟ ಶರಣ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್ ನ ಅವತಾರ್ ಪುರುಷ ಚಿತ್ರ ಹಾರರ್ ಕಾಮಿಡಿ ಸಬ್ಜೆಕ್ಟ್ ಹೊಂದಿದ್ದು ಪ್ರೇಕ್ಷಕರಲ್ಲಿ ಭಯ ಮತ್ತು ಕಾಮಿಡಿಯನ್ನ ಏಕ ಕಾಲಕ್ಕೆ ಹೊಮ್ಮಿಸಲಿದ್ದು, ಶರಣ್ ಮತ್ತು ಸುನಿ ಶೈಲಿಯ ಜೊತೆಗೆ ಆಪ್ತಮಿತ್ರ ಥರಹದ ಕಾಮಿಡಿಯನ್ನ ಈ ಚಿತ್ರದಲ್ಲಿ ನೋಡಬಹುದಾಗಿದೆ.
![]()
ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಗೋದಿ ಬಣ್ಣ ಸಾಧಾರಣ ಮೈಕಟ್ಟು ನಂತಹ ಸಕ್ಸಸ್ ಚಿತ್ರಗಳನ್ನನ ಕನ್ನಡಿಗರಿಗೆ ಕೊಟ್ಟ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಿನಿಮಕ್ಕೆ ಬಂಡವಾಳ ಹೂಡಿದ್ದು ಪುಷ್ಕರ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿನಿಮ ತೆರೆಕಾಣಲಿದೆ.
ಶರಣ್ ಗೆ ನಾಯಕಿಯಾಗಿ ಚಂದನವನದ ಚಿಟ್ಟೆ; ಮತ್ತೆ ಒಂದಾದ ರ್ಯಾಂಬೋ 2 ಜೋಡಿ:
ಅವತಾರ ಪುರುಷನಿಗೆ ಚಿತ್ರದಲ್ಲಿ ನಾಯಕಿಯಾಗಿ ಈ ಹಿಂದೆ ಚುಟು ಚುಟು ಅಂತ ಹೆಜ್ಜೆ ಹಾಕಿದ್ದ ಅಶಿಕಾ ರಂಗನಾಥ್ ಈ ಚಿತ್ರದಲ್ಲು ಶರಣ್ ಜೊತೆ ತೆರೆ ಹಂಚಿಕೊಂಡಿದ್ದು, ಈ ಚಿತ್ರದಲ್ಲಿ ಪಕ್ಕಾ ಮಾರ್ಡನ್ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
![]()
ಹೊಸ ಅವತಾರದಲ್ಲಿ ಶ್ರೀನಗರ ಕಿಟ್ಟಿ:
ಇನ್ನು, ಬಹುದಿನಗಳಿಂದ ಕಾಣದಂತೆ ಮಾಯವಾಗಿದ್ದ ನಟ ಶ್ರೀನಗರ ಕಿಟ್ಟಿ ಅವತಾರ್ ಪುರುಷ ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದು, ಬ್ಲಾಕ್ ಮ್ಯಾಜಿಷಿಯನ್ ಆಗಿ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಅಷ್ಟೇ ಅಲ್ಲದೆ ನಟ ಶರಣ್ ಅವರ ಮಗಳು ‘ಪುಣ್ಯ’ ಕೂಡ ನಟಿಸುತ್ತಿದ್ದು, ಈ ಮೂಲಕ ಅಪ್ಪನ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
![]()
ಇನ್ನೂ ದೊಡ್ಡ ದೊಡ್ಡ ನಟರ ದಂಡೆ ಈ ಚಿತ್ರದಲ್ಲಿದ್ದು, ಸಾಯಿಕುಮಾರ್, ಸಾಧುಕೋಕಿಲ, ಶ್ರೀನಗರ ಕಿಟ್ಟಿ ಸುಧಾರಾಣಿ, ಅಯ್ಯಪ್ಪ, ಭವ್ಯ ಸೇರಿದಂತೆ ಹಲವಾರು ಕಲಾವಿದರು ಅವತಾರ ಪುರುಷನಿಗೆ ಸಾಥ್ ಕೊಡಲಿದ್ದಾರೆ.




