ಬೆಂಗಳೂರು: ತೆಲಗು, ತಮಿಳು ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಬಾಹುಬಲಿ ಸಿನಿಮಾ ಖ್ಯಾತಿಯ, ಕನ್ನಡತಿ, ನಟಿ ಅನುಷ್ಕಾ ಶೆಟ್ಟಿ ಅವರು ಮತ್ತೊಮ್ಮೆ ಕನ್ನಡಿಗರ ಮನಗೆದ್ದಿದ್ದಾರೆ.
ಹೌದು ನಟಿ ಅನುಷ್ಕಾ ಶೆಟ್ಟಿ ಅವರು ಈ ಬಾರಿ ದಸರಾ ಹಬ್ಬಕ್ಕೆ ಕನ್ನಡದಲ್ಲೇ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ. ಇಂಗ್ಲಿಷ್‌ನಲ್ಲಿ ವಿಶ್ ಮಾಡುವ ಜೊತೆಗೆ ಕನ್ನಡದಲ್ಲೂ ಶುಭ ಕೋರಿರುವ ಅವರು, ‘ದಸರಾ ಹಬ್ಬದ ಶುಭಾಶಯಗಳು, ಸುರಕ್ಷಿತವಾಗಿರಿ’ ಎಂದು ಹೇಳಿದ್ದಾರೆ.
ಇತ್ತೀಚೆಗೆ ಅನುಷ್ಕಾ ಶೆಟ್ಟಿ ಅವರ ಅಭಿನಯದ ನಿಶಬ್ದಂ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದ್ದು ಯಶಸ್ವಿಯಾಗಿ ಪ್ರದರ್ಶವಾಗುತ್ತಿದೆ. ಇನ್ನು ನಟಿ ಅನುಷ್ಕಾ ಶೆಟ್ಟಿ ಅವರು ಲೇಡಿ ಓರಿಯೆಂಟೆಡ್ ಪಾತ್ರಗಳಿಗೆ ಹೆಸರುವಾಸಿಯಾಗಿದ್ದು, ಅರುಂಧತಿ, ಭಾಗಮತಿ, ರಾಣಿ ರುದ್ರಮದೇವಿ ಯಂತಹ ಯಶಸ್ವಿ ಸಿನಿಮಾಗಳನ್ನು ಮಾಡಿದ್ದಾರೆ.
ಇನ್ನು ನಟಿ ಅನುಷ್ಕಾ ಶೆಟ್ಟಿ ಅವರ ಈ ಟ್ವೀಟ್ ಗೆ ಅಭಿಮಾನಿಗಳು ಫಿದಾ ಆಗಿದ್ದು ಸಾಕಷ್ಟು ಮೆಚ್ಚುಗೆಗಳು ವ್ಯಕ್ತಪಡಿಸಿದ್ದಾರೆ.
Wishing you all a very #HappyDussehra
ದಸರಾ ಹಬ್ಬದ ಶುಭಾಶಯಗಳು
Stay Safe …Stay Blessed 🤗 pic.twitter.com/GBQxcxKVJM
— Anushka Shetty (@MsAnushkaShetty) October 25, 2020