ನಟಿ ಅನುಷ್ಕಾ ಶೆಟ್ಟಿ ವಿವಾಹದ ಸುದ್ದಿ ನಿಜವೇ? ವಯಸ್ಸಿನ ಬಗ್ಗೆ ಚರ್ಚಿಸುವವರ ವಿರುದ್ಧ ಕಿಡಿಕಾರಿದ ನಟಿ!

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟಿ, ಕನ್ನಡಿಗರ ನೆಚ್ಚಿನ ‘ಸ್ವೀಟಿ’ ಅನುಷ್ಕಾ ಶೆಟ್ಟಿ ಅವರ ಮದುವೆಯ ವಿಚಾರ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಅನುಷ್ಕಾ ಅವರು ಬೆಂಗಳೂರು…

Actress Anushka Shetty official statement on marriage rumors with a businessman - Vijayaprabha News.

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟಿ, ಕನ್ನಡಿಗರ ನೆಚ್ಚಿನ ‘ಸ್ವೀಟಿ’ ಅನುಷ್ಕಾ ಶೆಟ್ಟಿ ಅವರ ಮದುವೆಯ ವಿಚಾರ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಅನುಷ್ಕಾ ಅವರು ಬೆಂಗಳೂರು ಮೂಲದ ಉದ್ಯಮಿಯೊಬ್ಬರ ಜೊತೆ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿ ಹರಡಿದ್ದವು. ಸದ್ಯ ಈ ಎಲ್ಲಾ ಊಹಾಪೋಹಗಳಿಗೆ ಅನುಷ್ಕಾ ಶೆಟ್ಟಿ ಅವರ ಅಧಿಕೃತ ತಂಡವು ಸುದೀರ್ಘ ಪೋಸ್ಟ್ ಮಾಡುವ ಮೂಲಕ ತೆರೆ ಎಳೆದಿದೆ.

ವದಂತಿಗಳಿಗೆ ಬ್ರೇಕ್ ಹಾಕಿದ ತಂಡ

ಅನುಷ್ಕಾ ಮದುವೆಯ ಬಗ್ಗೆ ಹರಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾದವು ಎಂದು ಅವರ ತಂಡ ಸ್ಪಷ್ಟಪಡಿಸಿದೆ. “ಯಾವುದೇ ಅಧಿಕೃತ ಮಾಹಿತಿ ಇಲ್ಲದೆ ಒಬ್ಬರ ವೈಯಕ್ತಿಕ ಜೀವನವನ್ನು ಪ್ರತಿದಿನದ ಮುಖ್ಯಾಂಶವನ್ನಾಗಿ ಮಾಡುವುದು ಸರಿಯಲ್ಲ. ಕೇವಲ ಊಹೆ ಮತ್ತು ಪರಿಶೀಲಿಸದ ಮಾಹಿತಿಯನ್ನು ಪ್ರಕಟಿಸುವುದು ಪತ್ರಿಕೋದ್ಯಮವಲ್ಲ, ಅದು ವ್ಯಕ್ತಿಯ ಖಾಸಗಿತನದ ಮೇಲಿನ ಅತಿಕ್ರಮಣ” ಎಂದು ತಂಡವು ಅಸಮಾಧಾನ ವ್ಯಕ್ತಪಡಿಸಿದೆ.

‘ಏಜ್ ಶೇಮಿಂಗ್’ ವಿರುದ್ಧ ಆಕ್ರೋಶ

ವಿಶೇಷವಾಗಿ ಅನುಷ್ಕಾ ಅವರ ವಯಸ್ಸನ್ನು (44) ಹೈಲೈಟ್ ಮಾಡುತ್ತಿರುವವರ ವಿರುದ್ಧ ತಂಡವು ಕಿಡಿಕಾರಿದೆ. “ಪ್ರತಿ ಪೋಸ್ಟ್‌ನಲ್ಲೂ ವಯಸ್ಸನ್ನು ಉಲ್ಲೇಖಿಸುವುದು ಒಂದು ರೀತಿಯ ‘ಏಜ್ ಶೇಮಿಂಗ್’. ನಟರ ವಿಷಯದಲ್ಲಿ ಈ ರೀತಿ ಚರ್ಚೆ ಮಾಡದವರು, ನಟಿಯರ ವಿಚಾರ ಬಂದಾಗ ಮಾತ್ರ ಯಾಕೆ ಇಷ್ಟು ಆಸಕ್ತಿ ತೋರಿಸುತ್ತಾರೆ? ನಟಿಯರನ್ನೂ ಸಮಾನ ಗೌರವದಿಂದ ಕಾಣಿ” ಎಂದು ತಂಡವು ಮನವಿ ಮಾಡಿದೆ.

Vijayaprabha Mobile App free

ಅನುಷ್ಕಾ ಶೆಟ್ಟಿ ಅವರು ಎಂದಿಗೂ ಅಗ್ಗದ ಪ್ರಚಾರಕ್ಕಾಗಿ ಇಂತಹ ಸುದ್ದಿಗಳನ್ನು ಬಳಸಿಕೊಂಡಿಲ್ಲ. ಮದುವೆ ಎಂಬುದು ಅವರ ವೈಯಕ್ತಿಕ ನಿರ್ಧಾರವಾಗಿದ್ದು, ಅಂತಹ ಶುಭ ಸುದ್ದಿ ಇದ್ದರೆ ಅವರೇ ಅಧಿಕೃತವಾಗಿ ತಿಳಿಸಲಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.

ಸಿನಿಮಾ ಜೀವನದತ್ತ ಗಮನ

ಸದ್ಯ ಅನುಷ್ಕಾ ಶೆಟ್ಟಿ ಅವರು ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಜಯಸೂರ್ಯ ಅವರೊಂದಿಗೆ ‘ಕಥನಾರ್: ದಿ ವೈಲ್ಡ್ ಸೋರ್ಸೆರರ್’ (Kathanar: The Wild Sorcerer) ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇದಲ್ಲದೆ ತೆಲುಗಿನಲ್ಲಿ ‘ಘಾಟಿ’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply