ಬೆಂಗಳೂರು : ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಬಹು ನಿರೀಕ್ಷಿತ ಜೇಮ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಈ ಹಿಂದೆ ರಾಜಕುಮಾರ ಸಿನಿಮಾದಲ್ಲಿ ನಟಿಸಿದ್ದ ನಟಿ ಪ್ರಿಯ ಆನಂದ್ ನಟಿಸುವುದು ಬಹುತೇಕ ಖಚಿತವಾಗಿದೆ.
ಇನ್ನು ಈ ಚಿತ್ರದಲ್ಲಿ ನಟಿ ಅನುಪ್ರಭಾಕರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅನು ಪ್ರಭಾಕರ್, ನನ್ನ ಪಾಲಿನ ದೇವರುಗಳಾದ ನಿಮ್ಮ ತಂದೆ ತಾಯಿ, ನನ್ನನ್ನು ಕನ್ನಡಿಗರಿಗೆ ನಿಮ್ಮ ಅಣ್ಣ ಶಿವಣ್ಣನ ಜೋಡಿಯಾಗಿ ಪರಿಚಯಿಸಿದರು.
21 ವರ್ಷಗಳ ನಂತರ ಈಗ ನಿಮ್ಮ ಜೊತೆ ಅಭಿನಯಿಸುವ ಅವಕಾಶ ದೊರೆತಿದೆ ಎಂದು ಹೇಳುವ ಮೂಲಕ ನಾನು ತ್ರಿಲ್ ಆಗಿದ್ದು ಈ ಸಿನಿಮಗೋಸ್ಕರ ಎದುರು ನೋಡುತ್ತಿದ್ದೇನೆ ಪುನೀತ್, ಶಿವಣ್ಣಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಜೇಮ್ಸ್ ಸಿನಿಮಾವನ್ನು ಭರ್ಜರಿ ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ನಟಿ ಪ್ರಿಯ ಆನಂದ್, ಅನುಪ್ರಭಾಕರ್, ಆದಿತ್ಯ ಮೆನೆನ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ನನ್ನ ಪಾಲಿನ ದೇವರುಗಳಾದ ನಿಮ್ಮ ತಂದೆ ತಾಯಿ , ನನ್ನನ್ನು ಕನ್ನಡಿಗರಿಗೆ, ನಿಮ್ಮ ಅಣ್ಣ @NimmaShivanna ಅವರ ಜೋಡಿಯಾಗಿ ಪರಿಚಯಿಸಿದರು . 21 ವರ್ಷಗಳ ನಂತರ ಈಗ ನಿಮ್ಮ ಜೊತೆ ಅಭಿನಯಿಸುವ ಅವಕಾಶ ದೊರೆತಿದೆ @PuneethRajkumar .I am thrilled and looking forward to this! #jameskannadamovie #puneethrajkuma #anuprabhakar pic.twitter.com/sog2GrDHhp
— Anu Prabhakar Mukherjee (@AnuPrabhakar9) October 15, 2020