ಹೈದರಾಬಾದ್: ಪ್ರೇಮಂ, ಫಿದಾ ಸಿನಿಮಾ ಖ್ಯಾತಿಯ ನಟಿ ಸಾಯಿ ಪಲ್ಲವಿ ಯಾವುದೇ ರೀತಿಯ ಗ್ಲಾಮರ್ ಮಾಡದೇ ಕೇವಲ ತನ್ನ ನಟನೆ, ನೃತ್ಯದ ಮೂಲಕ ಅಪಾರ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ.
ಪ್ರಸ್ತುತ ತೆಲುಗು ಮತ್ತು ತಮಿಳು ಭಾಷೆಗಳ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿರುವ ನ್ಯಾಚುರಲ್ ಬ್ಯುಟಿ ಸಾಯಿ ಪಲ್ಲವಿ ಇತ್ತೀಚೆಗೆ ತಮ್ಮ ಸಿನಿಮಾಗಳಿಗೆ ಸಂಬಂಧಿಸಿದ ರಹಸ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಸಿನಿಮಾ ಯಾವುದೆಂದು ಹೇಳಲಿಲ್ಲ ಆದರೆ ಆ ನಿರ್ದೇಶಕ ಲಿಪ್‌ಲಾಕ್ ಸೀನ್ ಮಾಡು ಎಂದರೆ ತಪ್ಪಿಸಿಕೊಂಡಿದ್ದೆ ಎಂದು ಹೇಳಿದರು.
ಸಿನಿಮಾ ವೃತ್ತಿಜೀವನದ ಆರಂಭದಿಂದಲೂ ರೋಮ್ಯಾಂಟಿಕ್ ಹಾಗು ಎಸ್ಪೋಸಿಂಗ್ ದೃಶ್ಯಗಳಿಂದ ದೂರವಿರುವ ನಟಿ ಸಾಯಿ ಪಲ್ಲವಿ ಅವರನ್ನು ನಿರ್ದೇಶಕರೊಬ್ಬರು ನಾಯಕನೊಂದಿಗೆ ಲಿಪ್ಕಿಸ್ ಮಾಡಲು ಕೇಳಿಕೊಂಡಿದ್ದರಂತೆ. ಕಥೆಯ ಭಾಗವಾಗಿ, ನಾಯಕನ ತುಟಿಗಳ ಮೇಲೆ ಗಟ್ಟಿಯಾಗಿ ಲಿಪ್ ಲಾಕ್ ಮಾಡಲು ಹೇಳಿದ್ದರು. ಇದರಿಂದ ಅಂತಹ ದೃಶ್ಯಗಳಲ್ಲಿ ನಟಿಸುವುದು ತನಗೆ ಸಾಧ್ಯವಿಲ್ಲವೆಂದು ಎಂದು ಸಾಯಿ ಪಲ್ಲವಿ ಆ ನಿರ್ದೇಶಕನಿಗೆ ಸ್ಪಾಟ್ ನಲ್ಲಿಯೇ ಹೇಳಿದ್ದರಂತೆ. ಆ ಸಮಯದಲ್ಲಿ ಮೀಟೂ ಚಳುವಳಿ ತುಂಬಾ ಜೋರಾಗಿದ್ದರಿಂದ ಆ ನಿರ್ದೇಶಕರು ಲಿಪ್‌ಲಾಕ್ ಸೀನ್ ಮಾಡಲು ಒತ್ತಾಯಿಸಲಿಲ್ಲ ಎಂದು ‘ಮೀಟೂ’ ಕಾರಣದಿಂದಾಗಿ ಲಿಪ್‌ಲಾಕ್ ದೃಶ್ಯದಿಂದ ತಪ್ಪಿಸಿಕೊಂಡಿದ್ದೆ ಎಂದು ಹೇಳಿದರು.
ನಟಿ ಸಾಯಿ ಪಲ್ಲವಿ ಪ್ರಸ್ತುತ ತೆಲುಗು ‘ವಿರಾಟಪರ್ವಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದಗ್ಗುಬಾಟಿ ರಾಣಾ ನಾಯಕನಾಗಿ ನಟಿಸಿರುವ ಈ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇನ್ನು ತಮಿಳು ವೆಬ್ ಸರಣಿ ‘ಪಾವಕಂತೈಗಲ್’ ನಲ್ಲಿಯೂ ಸಹ ಸಾಯಿ ಪಲ್ಲವಿ ನಟಿಸಿದ್ದಾರೆ. ನಾಲ್ಕು ಕಥೆಗಳಲ್ಲಿ ಬರಲಿರುವ ಈ ವೆಬ್ ಸರಣಿಯಲ್ಲಿ ಸಾಯಿ ಪಲ್ಲವಿ ಒಂದು ಕಥೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್ 18 ರಂದು ಬಿಡುಗಡೆಯಾಗಲಿರುವ ಈ ವೆಬ್ ಸರಣಿಯಲ್ಲಿ ನಟ ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.