ನಟ ಅಕ್ಕಿನೇನಿ ನಾಗಚೈತನ್ಯ ಜೊತೆ ವಿಚ್ಛೇದನ ಪಡೆದ ಬಳಿಕ ನಟಿ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಸಕತ್ ಬ್ಯುಸಿಯಾಗಿದ್ದಾರೆ.
ಇತ್ತೀಚಿಗೆ ಬಿಡುಗಡೆಯಾದ ತೆಲುಗಿನ ‘ಪುಷ್ಪ’ ಚಿತ್ರದ “ಊ ಅಂಟಾನಾ ಮಾಮಾ..” ಐಟಂ ಸಾಂಗ್ ಮೂಲಕ ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ನಟಿ ಸಮಂತಾ, ಇದೀಗ ಮತ್ತೊಂದು ಐಟಂ ಸಾಂಗ್ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಹೌದು, ವಿಜಯ್ ದೇವರಕೊಂಡ ಅಭಿನಯದ ‘ಅರ್ಜುನ್ ರೆಡ್ಡಿ’ ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ-ರಣಬೀರ್ ಕಪೂರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ‘ಎನಿಮಲ್’ ಸಿನಿಮಾದಲ್ಲಿನ ಐಟಂ ಸಾಂಗ್ ಗಾಗಿ ಸಮಂತಾ ಅವರನ್ನು ಹಾಕಿಕೊಳ್ಳಲು ನಿರ್ಧರಿಸಲಾಗಿದೆ ಎನ್ನಲಾಗಿದ್ದು, ಇದಕ್ಕೆ ಸಮಂತಾ, ಒಪ್ಪಿಕೊಳ್ಳುತ್ತಾರಾ? ಇಲ್ಲವಾ? ಅನ್ನೋದು ಸದ್ಯದ ಪ್ರಶ್ನೆ.