ಬೆಂಗಳೂರು: ಮಾಜಿ ಸಂಸದೆ ಮತ್ತು ನಟಿ ಸುಮಲತಾ ಅಂಬರಿಶ್ ಅವರ ಮನೆಯಲ್ಲಿ ನಾಮಕರಣ ಸಮಾರಂಭ ಅದ್ದೂರಿಯಾಗಿ ಆಯೋಜನೆಗೊಂಡಿದೆ. ಇಂದು ಪ್ರತಿಷ್ಠಿತ ಹೋಟೆಲ್ನಲ್ಲಿ ಅಂಬರೀಶ್ ಅವರ ಮೊಮ್ಮಗನ ನಾಮಕರಣ ಸಮಾರಂಭ ನಡೆಯಲಿದ್ದು, ಸಮಾರಂಭಕ್ಕೆ ಸ್ಯಾಂಡಲ್‌ವುಡ್‌ನ ಅನೇಕ ಗಣ್ಯರನ್ನು ಆಹ್ವಾನಿಸಲಾಗಿದೆ.
ಈ ನಾಮಕರಣ ಸಮಾರಂಭದಲ್ಲಿ ನಟ ದರ್ಶನ ಭಾಗವಹಿಸುತ್ತಾರೆಯೇ ಎಂಬುದು ಎಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸುಮಲತಾ, ಅಭಿಷೇಕ್ ಮತ್ತು ಅವಿವಾ ಅಭಿಷೇಕ್ ಅವರನ್ನು ದರ್ಶನ್, ಅನ್ಫಾಲೋ ಮಾಡಿದ್ದರು. ಇದರಿಂದಾಗಿ, ಅಂಬರೀಶ್ ಕುಟುಂಬದ ವಿರುದ್ಧ ದರ್ಶನಗೆ ದ್ವೇಷವಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಅಂತಹ ಯಾವುದೇ ದ್ವೇಷವಿಲ್ಲ ಎಂದು ಸುಮಲತಾ ಅಂಬರಿಶ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ದರ್ಶನ ಯಾವಾಗಲೂ ಕುಟುಂಬದ ವ್ಯಕ್ತಿಯಾಗಿದ್ದಾನೆ ಎಂದು ಅವರು ಹೇಳಿದರು.
ಅಭಿಷೇಕ್ ಮತ್ತು ಅವಿವಾ ಅವರ ಮಗುವಿನ ನಾಮಕರಣ ಸಮಾರಂಭಕ್ಕೆ ದರ್ಶನ್ ಬರುತ್ತಾರೆಯೇ? ಬರಲ್ವಾ ಎನ್ನುವುದರ ಬಗ್ಗೆ ಕುತೂಹಲವಿದೆ. ಸುಮಲತಾ ಅವರ ಮನೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ದರ್ಶನ ಉಪಸ್ಥಿತರಿರುತ್ತಾರೆ. ಅವರು ಎಷ್ಟೇ ಕಾರ್ಯನಿರತರಾಗಿದ್ದರೂ, ಸುಮಲತಾ ಅವರ ಮನೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಹಾಜರಾಗಿರುತ್ತಾರೆ. ಅವರು ಸುಮಲತಾ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲೂ ಭಾಗಿಯಾಗಿದ್ದರು. ಅವರ ರಾಜಕೀಯ ಪಯಣಕ್ಕೂ ಅವರು ಪರೋಕ್ಷವಾಗಿ ಸಹಾಯ ಮಾಡಿದ್ದಾರೆ. ಆದ್ದರಿಂದ, ಈ ನಾಮಕರಣ ಸಮಾರಂಭಕ್ಕೆ ದರ್ಶನ್ ಬರುವ ನಿರೀಕ್ಷೆಯಿದೆ.
ದರ್ಶನ್ ಮತ್ತು ಅಂಬರೀಶ್ ಅವರ ಕುಟುಂಬದ ನಡುವಿನ ಬಾಂಧವ್ಯವು ಹಲವು ವರ್ಷಗಳಿಂದ ಬಲವಾಗಿದೆ. ಈ ನಾಮಕರಣ ಸಮಾರಂಭವು ಈ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.