Big B Replay to Rumors: ಐಶ್ವರ್ಯಾ ಮತ್ತು ಅಭಿಷೇಕ್ ನಡುವಿನ ಗೊಂದಲದ ಗಾಸಿಪ್ಗೆ ಅಮಿತಾಭ್ ಬಚ್ಚನ್ ಪ್ರತಿಕ್ರಿಯೆ

ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ತಮ್ಮ ಪುತ್ರ ಅಭಿಷೇಕ್ ಬಚ್ಚನ್ ಅವರ ಮುಂದಿನ ಸಿನಿಮಾದ ‘ಐ ವಾಂಟ್ ಟು ಟಾಕ್’ ಪ್ರಚಾರದೊಂದಿಗೆ ಕೆಬಿಸಿ(KBC)ನ ಶುಕ್ರವಾರದ ವಿಶೇಷ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಆದರೆ,…

ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ತಮ್ಮ ಪುತ್ರ ಅಭಿಷೇಕ್ ಬಚ್ಚನ್ ಅವರ ಮುಂದಿನ ಸಿನಿಮಾದ ‘ಐ ವಾಂಟ್ ಟು ಟಾಕ್’ ಪ್ರಚಾರದೊಂದಿಗೆ ಕೆಬಿಸಿ(KBC)ನ ಶುಕ್ರವಾರದ ವಿಶೇಷ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಆದರೆ, ಈ ಸಮಯದಲ್ಲಿ ಎಲ್ಲರಿಗೂ ಅವರು ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಕುರಿತು ಕೇಳಿಬರುತ್ತಿರುವ ವಿಚ್ಛೇದನದ ಗಾಸಿಪ್ ಬಗ್ಗೆ ಮಾತನಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಈ ಕುರಿತು ಪ್ರತಿಕ್ರಿಯಿಸಿದ ಅವರು, ಈ ಎಲ್ಲ ಊಹಾಪೋಹಗಳು ನಿಜವಲ್ಲ ಎಂದು ಸ್ಪಷ್ಟಪಡಿಸಿದರು.  

ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಅವರ ಮಗಳು ಆರಾಧ್ಯ ಬಚ್ಚನ್ ನವೆಂಬರ್ 16 ರಂದು ತಮ್ಮ 13ನೇ ಜನ್ಮದಿನವನ್ನು ಮನೆಯಲ್ಲೇ ಸರಳವಾಗಿ ಆಚರಿಸಿದರು. ಐಶ್ವರ್ಯಾ ಈ ಸಂಭ್ರಮದ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಆದರೆ ಈ ಕುಟುಂಬ ಫೋಟೋಗಳಲ್ಲಿ ಅಭಿಷೇಕ್ ಕಾಣಿಸದಿರುವುದರಿಂದ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಗಾಸಿಪ್ ಮತ್ತೆ ಮುನ್ನಲೆಗೆ ಬಂದಿತ್ತು.  

ಈ ಗಾಸಿಪ್‌ಗಳಿಗೆ ಅಮಿತಾಭ್ ಬಚ್ಚನ್ ತಮ್ಮ ಬ್ಲಾಗ್ ಮೂಲಕ ಉತ್ತರಿಸಿದ್ದಾರೆ. “ನಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡುವಾಗ ಸಾಕಷ್ಟು ಧೈರ್ಯ, ದೃಢನಿಷ್ಠೆ ಮತ್ತು ಪ್ರಾಮಾಣಿಕತೆ ಇರಬೇಕು. ನಮ್ಮ ಜೀವನದ ಮೇಲೆ ನಮಗೆ ನಂಬಿಕೆ ಇರಬೇಕು. ನಮ್ಮ ವೈಯಕ್ತಿಕ ಜೀವನದ ಬಗ್ಗೆ ನಾನು ಅಪರೂಪವಾಗಿ ಮಾತನಾಡುತ್ತೇನೆ. ಏಕೆಂದರೆ ಅದರ ಗೌಪತ್ಯೆಯನ್ನು ಕಾಪಾಡಬೇಕಾದದ್ದು ನಮ್ಮ ಕರ್ತವ್ಯವಾಗಿರುತ್ತದೆ” ಎಂದು ಆರಂಭದಲ್ಲಿ ಹೇಳಿದ್ದಾರೆ. 

Vijayaprabha Mobile App free

“ಊಹಾಪೋಹಗಳೆಂದರೆ ಊಹಾಪೋಹಗಳು. ಅವು ಪರಿಶೀಲಿಸದ ಸತ್ಯವಿಲ್ಲದ ಮಾತುಗಳು. ಪರಿಶೀಲನೆ ಮಾಡುವುದು ಅವರ ಕೆಲಸ, ಅದು ಅವರ ವೃತ್ತಿ ಮತ್ತು ವ್ಯಾಪಾರಕ್ಕೆ ತಕ್ಕಂತಹ ಸತ್ಯಾವಶ್ಯಕತೆಯೊಂದಿಗೆ ಬರುತ್ತದೆ. ನಾನು ಅವರ ವೃತ್ತಿಯ ಆಕಾಂಕ್ಷೆ ವಿರುದ್ಧ ಪ್ರಶ್ನೆ ಮಾಡಲಾರೆ, ಆದರೆ, ಅಪೂರ್ಣ ಸತ್ಯ ಅಥವಾ ಪ್ರಶ್ನಾರ್ಥಕ ಚಿಹ್ನೆ ಬಳಸಿಕೊಂಡು ಊಹಾಪೋಹ ಹರಡುವುದು ಕಾನೂನು ಕವಚವಾಯಿತೆಂದು ಅನಿಸುತ್ತಿದೆ. ಆದರೆ ಇವು ಓದುಗರ ಮನದಲ್ಲಿ ಶಂಕೆಯ ಬಿತ್ತನೆ ಮಾಡುತ್ತವೆ.” ಎಂದಿದ್ದಾರೆ.

ಬಳಿಕ ಗಾಸಿಪ್ ಬಗ್ಗೆ ಟೀಕಿಸುತ್ತಾ “ಬರೆಯಿರಿ, ವ್ಯಕ್ತಪಡಿಸಿರಿ, ಆದರೆ ಅದನ್ನು ಪ್ರಶ್ನಾರ್ಥಕ ಗುರುತಿನೊಂದಿಗೆ ಮುಕ್ತಾಯ ಮಾಡುವಾಗ, ನೀವು ಬರೆಯುವುದು ಪ್ರಶ್ನಾರ್ಹವಾಗಿದೆ ಎಂದು ಸೂಚಿಸುವ ಜೊತೆಗೆ, ಓದುಗನು ಅದನ್ನು ಹೆಚ್ಚು ಯೋಚಿಸಲು ಪ್ರೇರೇಪಿಸುತ್ತಿದ್ದೀರಿ. ಅದು ಕೆಲ ಸಮಯ ಮಾತ್ರವಲ್ಲ, ಬದಲಾಗಿ ಹಲವಾರು ಸಮಯದವರೆಗೆ ನೀವು ಬರೆದ ವಿಷಯ ಮೌಲ್ಯಯುತವಾಗುತ್ತದೆ.” ಎಂದರು.  

ಅವರು ತಮ್ಮ ಬ್ಲಾಗ್ ಅನ್ನು ಅಂತಿಮಗೊಳಿಸುತ್ತಾ “ನಾನು ಇದಕ್ಕೆ ಪ್ರಶ್ನಾರ್ಥಕ ಗುರುತು ಹಾಕಿದ್ದೇನೆ, ಇದು ಹೀಗೆಯೇ…!!!! ಮುಂದಿನ ವಿಷಯಕ್ಕೆ ಹೋಗಿ. ಪ್ರತಿ ವೃತ್ತಿಗೂ ಇಂತಹ ಗುಣ ಲಕ್ಷಣಗಳು ಇರಬಹುದು… ಇದು ನನ್ನ ಬರವಣಿಗೆಯ ಕವಚ.” ಎಂದು ಅಮಿತಾಬ್ ಬರೆದುಕೊಂಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.