Siddharth Second Marriage: ದಕ್ಷಿಣ ಭಾರತದ ಖ್ಯಾತ ಬೊಮ್ಮರಿಲ್ಲು, ಬಾಯ್ಸ್ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟ ಸಿದ್ಧಾರ್ಥ್ & ನಟಿ ಅದಿತಿರಾವ್ ಹೈದರಿ ರಹಸ್ಯವಾಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆಂದು ವರದಿಯಾಗಿದ್ದು ಎಲ್ಲೆಡೆ ಸುದ್ದಿ ಹರಿದಾಡುತ್ತಿದೆ.
ಇದನ್ನು ಓದಿ: ಹೆಣ್ಣು ಮಕ್ಕಳಿಗೆ ಸೂಪರ್ ಸ್ಕೀಮ್; ಎಲ್‌ಐಸಿ ಕನ್ಯಾದಾನ ಪಾಲಿಸಿಯ ಬಗ್ಗೆ ನಿಮಗೆಷ್ಟು ಗೊತ್ತು..?
ಹೌದು, ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀರಂಗಪುರದಲ್ಲಿರುವ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ನಟ ಸಿದ್ಧಾರ್ಥ್ & ನಟಿ ಅದಿತಿರಾವ್ ಹೈದರಿ ಜೋಡಿಯ ವಿವಾಹವಾಗಿದೆ ಎಂದು ವರದಿಯಾಗಿದೆ.ಆದರೆ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಅವರು ತಮ್ಮ ವಿವಾಹದ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ನೀಡಿಲ್ಲ

ನಟ ಸಿದ್ಧಾರ್ಥ್ & ನಟಿ ಅದಿತಿರಾವ್ ಹೈದರಿ ಹಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದು ಗೊತ್ತೇ ಇದೆ. ʻಮಹಾ ಸಮುದ್ರಮ್ʼ ಚಿತ್ರದಲ್ಲಿ ಸಿದ್ಧಾರ್ಥ್ ಮತ್ತು ಅದಿತಿ ಒಟ್ಟಾಗಿ ಅಭಿನಯಿಸಿದ್ದರು. ಅಲ್ಲಿಂದ ಈ ಜೋಡಿ ಮಧ್ಯೆ ಆಪ್ತತೆ ಹೆಚ್ಚಾಗಿತ್ತು. ಸಿದ್ಧಾರ್ಥ್ ಈ ಹಿಂದೆ ‘ರಂಗ್ ದೇ ಬಸಂತಿ’ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಇದನ್ನು ಓದಿ: ಖ್ಯಾತ ನಟಿ, ಯೋಗ ಬ್ಯುಟಿ ಅನುಷ್ಕಾ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ; ಲೋಕಸಭಾ ಚುನಾವಣೆಗೆ ಸಾನಿಯಾ ಮಿರ್ಜಾ ಸ್ಪರ್ಧೆ..!?
Siddharth Second Marriage: ಈ ಹಿಂದೆಯೇ ಸಿದ್ದಾರ್ಥ್ ಮದುವೆ
ಹಲವು ದಿನಗಳಿಂದ ನಟಿ ಅದಿತಿ ರಾವ್ ಹೈದರಿ ಜೊತೆ ಡೇಟಿಂಗ್ ಮೂಲಕ ಸಿದ್ಧಾರ್ಥ್ ಸುದ್ದಿಯಲ್ಲಿದ್ದರು. ಆದರೆ, ಇದ್ದಕ್ಕಿದ್ದಂತೆ ಅದಿತಿ ಎರಡನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕ್ರಮದಲ್ಲಿ ಕೆಲವರು.. ಈತನಿಗೆ ಈಗಾಗಲೇ ಮದುವೆ ಆಗಿದೆಯೇ? ಎಂದು ಕೆಲವರು ಆಶ್ಚರ್ಯ ಪಡುತ್ತಿದ್ದಾರೆ. ಇನ್ನೂ ಹದಿಹರೆಯದ ಹುಡುಗನಂತೆ ಕಾಣುವು ಸಿದ್ಧಾರ್ಥ್ ಎರಡನೇ ಮದುವೆ ಆಗಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ.
ಮೂರೇ ವರ್ಷಕ್ಕೆ ಬಿನ್ನಾಭಿಪ್ರಾಯ; ಅವಳಿಂದಲೇ ವಿಚ್ಛೇದನ

ಹೌದು, ನಟ ಸಿದ್ಧಾರ್ಥ್ 2003 ರಲ್ಲಿ ತಮ್ಮ ಬಾಲ್ಯದ ಗೆಳತಿ ಮೇಘನಾ ಅವರನ್ನು ವಿವಾಹವಾದರು. ಸಿದ್ದಾರ್ಥ್ ಮತ್ತು ಮೇಘನಾ ನಡುವಿನ ಸ್ನೇಹ ಪ್ರೀತಿಗೆ ತಿರುಗಿ ಮದುವೆಯಾದರು. ಅವರಿಗೂ ಒಬ್ಬ ಮಗ ಇದ್ದಾನಂತೆ. ಆದರೆ ಮೂರೇ ವರ್ಷಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಏರ್ಪಟ್ಟು ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು.
ಇದನ್ನು ಓದಿ: ಮತದಾರರ ಪಟ್ಟಿ ಪ್ರಕಟ; ಮತದಾರರು, ಅಭ್ಯರ್ಥಿಗಳು, ಮತಗಟ್ಟೆಗಳ ಎಲ್ಲಾ ಮಾಹಿತಿ ಲಭ್ಯ..!
ಆದರೆ, ಇನ್ನು ಮುಂದೆ ಒಟ್ಟಿಗೆ ಸಾಧ್ಯವಿಲ್ಲವೆಂದು 2007 ರಲ್ಲಿ ವಿಚ್ಛೇದನ ಪಡೆದುಕೊಂಡರು. ಆ ವೇಳೆ ನಟಿ ಸೋಹಾ ಅಲಿ ಖಾನ್ ಜೊತೆಗೆ ಪ್ರೇಮಾಯಣ ನಡೆಸಿದ್ದರಿಂದ ದಂಪತಿ ನಡುವೆ ಬಿನ್ನಾಭಿಪ್ರಾಯ ಏರ್ಪಟ್ಟಿತ್ತು ಎಂದು ಮಾಧ್ಯಮಗಳು ಊಹಿಸಿದ್ದವು. ವಿಚ್ಛೇದನದ ನಂತರ, ಸಿದ್ಧಾರ್ಥ್ ಮತ್ತು ಸೋಹಾ ಅಲಿ ಖಾನ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ವರದಿಗಳು ಬಿತ್ತರವಾಗಿದ್ದವು. ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಅವರೂ ಬೇರ್ಪಟ್ಟರು.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |