ಮಾಡೆಲ್ ಮತ್ತು ಬಾಲಿವುಡ್ ನಟಿ ಸನ್ನಿ ಲಿಯೋನ್ Instagram ನಲ್ಲಿ ಕುತೂಹಲಕಾರಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ‘ಹೌದು ನಾನು ನಗುತ್ತಿದ್ದೇನೆ. ಯಾಕಂದ್ರೆ, ಅನುರಾಗ್ ಕಶ್ಯಪ್ ನಿರ್ದೇಶನದಲ್ಲಿ ನಟಿಸುವ ಕನಸು ನನಸಾಗಿದೆ. ಕಶ್ಯಪ್ ನನಗೆ ಅವಕಾಶ ನೀಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ’ ಎಂದು ಹೇಳಿದ್ದಾರೆ.
‘ಉದ್ಯಮದಲ್ಲಿ ನನ್ನ ಪ್ರಯಾಣ ಅದ್ಭುತವಾಗಿದ್ದರೂ, ಅದು ಸುಲಭವಾಗಿರಲಿಲ್ಲ. ಹಲವು ವರ್ಷಗಳ ನಂತರ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಸಿನಿಮಾದಲ್ಲಿ ಅವಕಾಶಕ್ಕಾಗಿ ಕರೆ ಬಂತು’. ಜೀವನದಲ್ಲಿ ಎಲ್ಲವೂ ಬದಲಾಗುವ ಕ್ಷಣಗಳಿವೆ, ಇದು ನನ್ನ ತಲೆ ಮತ್ತು ಹೃದಯದಲ್ಲಿ ಉಳಿಯುವ ಅದ್ಬುತ ಕ್ಷಣವಾಗಿದೆ ಎಂದು ಬರೆದುಕೊಂಡಿದ್ದಾರೆ.
ಏನೇ ಆಗಲಿ ನೀವು ಅನುರಾಗ್ ಸರ್ ನನಗೆ ಒಂದು ಅವಕಾಶವನ್ನು ಕೊಟ್ಟಿದ್ದೀರಿ, ಅದನ್ನು ನಾನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ನಿಮ್ಮ ಅದ್ಭುತ ಚಿತ್ರದ ಭಾಗವಾಗಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಎಂದು ನಟಿ ಸನ್ನಿ ಲಿಯೋನ್ ಫೋಟೋ ಪೋಸ್ಟ್ ಮಾಡಿದ್ದಾರೆ.
View this post on Instagram