ಬೆಂಗಳೂರು: ನಿರ್ದೇಶಕ, ಖ್ಯಾತ ನಟ ರಕ್ಷಿತ್ ಶೆಟ್ಟಿ ಅವರು ಸ್ಯಾಂಡಲ್ ವುಡ್ ನಲ್ಲಿ ಬಹುಮುಖ ಪ್ರತಿಭೆ ಅಂತಾನೇ ಹೇಳಬಹುದು ನಟನೆ, ನಿರ್ದೇಶನದ ಜೊತೆಗೆ ಈಗ ನಿರ್ಮಾಣದಲ್ಲಿಯೂ ಸಕ್ರಿಯರಾಗಿದ್ದಾರೆ .
ಹೌದು, ಪರಮ್ಯಾ ಸ್ಪಾಟೈಟ್ ಪ್ರೊಡಕ್ಷನ್ ‘ ಸಂಸ್ಥೆಯ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ಮೊದಲ ಚಿತ್ರ ‘ ಸ್ಟ್ರಾಬೆರಿ ‘ ಬಗ್ಗೆ ಈಗ ಮಾಹಿತಿ ಬಿಟ್ಟುಕೊಡಲಾಗಿದ್ದು, ಈಗಾಗಲೇ ಈ ಚಿತ್ರದ ಕೆಲಸಗಳ ಪ್ರಗತಿಯಲ್ಲಿವೆ. ವಿಶೇಷವೆಂದರೆ, ನಟಿ ಶ್ರುತಿ ಹರಿಹರನ್ ಅವರು ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಟಿ ಶ್ರುತಿ ಹರಿಹರನ್ ಅವರು ಈ ಸಿನಿಮಾದಲ್ಲಿ ಲೈಂಗಿಕ ಕಾರ್ಯಕರ್ತೆಯ ಪಾತ್ರ ನಿಭಾಯಿಸುತ್ತಿದ್ದಾರಂತೆ. ಅಮೃತಾ ಎಂಬ ಆ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದು, ಅವರ ಜೊತೆಗೆ ‘ದಿಯಾ’ ಸಿನಿಮಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಕೂಡ ನಟಿಸಿದ್ದಾರೆ.