ಮುಂಬೈ: ಮನೆಯವರೊಂದಿಗೆ ಹೊಂದಿಕೊಂಡುಹೋಗುವ ಸೊಸೆಗೆ ಡೈಮಂಡ್ ರಿಂಗ್ ಕೊಡ್ತಾರಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ. ಹೌದು ನಟಿ ಶಿಲ್ಪಾ ಶೆಟ್ಟಿ ಅವರ ಮಗ ವಿಯಂ ಗೆ ಇನ್ನು 8 ವರ್ಷ. ಆದರೆ ಈಗಲೇ ಸೊಸೆ ಬಗ್ಗೆ ಕನಸು ಕಂಡಿದ್ದಾರೆ ನಟಿ ಶಿಲ್ಪಾ ಶೆಟ್ಟಿ. ಎಲ್ಲಾ ತಂದೆ ತಾಯಿಗೂ ತಮ್ಮ ಮಕ್ಕಳ ಮೇಲೆ ಸಿಕ್ಕಾಪಟ್ಟೆ ಆಸೆಯಿರುವುದು ನಿಜ. ಅಂತಹ ತಂದೆ ತಾಯಿಗಿಂತ ಹೊರತೇನು ಅಲ್ಲ ಶಿಲ್ಪಾ ಶೆಟ್ಟಿ. ತಮ್ಮ ಮಗ ವಿಯನ್ ಹೆಂಡತಿಗೆ ಈಗಲೇ 20 ಕ್ಯಾರೆಟ್ ವಜ್ರವನ್ನು ಖರೀದಿಸಿಟ್ಟಿದ್ದಾರಂತೆ ನಟಿ ಶಿಲ್ಪ ಶೆಟ್ಟಿ.
ನಟಿ ಶಿಲ್ಪಾ ಶೆಟ್ಟಿ ಅವರಿಗೆ ಮೊದಲೇ ಜ್ಯುಯೆಲರಿ ಅಂದರೆ ಸಿಕ್ಕಾಪಟ್ಟೆ ಇಷ್ಟ. ಅವರ ಬಳಿ ಚಿನ್ನಾಭರಣಗಳ ಬಾರಿ ಕಲೆಕ್ಷನ್ ಇವೆಯಂತೆ. ಹೀಗಾಗಿ ಬರುವ ಸೊಸೆಗೆ 20 ಕ್ಯಾರೆಟ್ ವಜ್ರದ ರಿಂಗ್ ಅನ್ನು ಕೊಡುವ ಆಸೆಯಿದೆಯಂತೆ. ಆದರೆ ಡೈಮಂಡ್ ರಿಂಗ್ ಕೊಡಲು ಒಂದು ಕಂಡೀಷನ್ ಸಹ ಇಟ್ಟಿದ್ದಾರೆ.
ಅದೇನಂದರೆ ತನಗೆ ಸೊಸೆಯಾಗಿ ಬರುವವಳು ಮನೆಯಲ್ಲಿ ಎಲ್ಲರೊಂದಿಗೂ ಹೊಂದಿಕೊಂಡು ಹೋಗುವಂತವಳಾಗಿರಬೇಕು ಎಂದು ಶಿಲ್ಪಾ ಶೆಟ್ಟಿ ಹೇಳಿಕೊಂಡಿದ್ದಾರೆ. ಸದ್ಯ ಈ ಸುದ್ದಿ ಶೋಷಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ನಟಿ ಶಿಲ್ಪಿ ಶೆಟ್ಟಿಗೆ ಬರುವ ಸೊಸೆ ಸಿಕ್ಕಾಪಟ್ಟೆ ಅದೃಷ್ಟವಂತೆ ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ.