ಸ್ಯಾಂಡಲ್‌ವುಡ್ ಖ್ಯಾತ ನಟಿ ಮೋಹಕ ತಾರೆ ರಮ್ಯಾ ಅವರು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುವುದಾಗಿ ನಿನ್ನೆ ತಿಳಿಸಿದ್ದರು. ಅದರಂತೆ, ಇಂದು ಗಣೇಶ ಚತುರ್ಥಿಯಂದು ಗುಡ್ ನ್ಯೂಸ್ಕೊಟ್ಟಿದ್ದು, ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡುವುದಾಗಿ ರಮ್ಯಾ ಘೋಷಣೆ ಮಾಡಿದ್ದು, ತಮ್ಮ ಹೊಸ ನಿರ್ಮಾಣ ಸಂಸ್ಥೆಗೆ ‘ಆಪಲ್ ಬಾಕ್ಸ್’ ಎಂದು ಹಹೆಸರಿಟ್ಟಿದ್ದಾರೆ.
ಹೌದು, ಈ ಕುರಿತು ನಟಿ ರಮ್ಯಾ, ನಿಮ್ಮೆಲ್ಲರ ಊಹೆ ಸರಿಯಾಗಿದೆ. ನಾನು ಸಿನಿಮಾ ರಂಗಕ್ಕೆ ಮತ್ತೆ ಎಂಟ್ರಿ ಕೊಡುತ್ತಿದ್ದೇನೆ. ಆದರೆ, ಈ ಬಾರಿ ‘ಆಪಲ್ ಬಾಕ್ಸ್ ಸ್ಟುಡಿಯೋಸ್’ ಮೂಲಕ ನಿರ್ಮಾಪಕಿಯಾಗುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅಷ್ಟೇ ಅಲ್ಲ, ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹಕ್ಕೆ ಬೆಲೆ ಕಟ್ಟಲಾಗದ್ದು, ಪ್ರಸ್ತುತ ಆ್ಯಪಲ್ ಬಾಕ್ಸ್ 2 ಚಿತ್ರಗಳನ್ನು ನಿರ್ಮಿಸಲು ಸಜ್ಜಾಗಿದೆ ಎಂದು ಹೇಳಲು ನನಗೆ ಸಂತಸವಿದೆ ಎಂದು ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.
Happy Ganesha Habba ♥️
Here’s to new beginnings🤗@StudiosApplebox #AppleBoxStudios pic.twitter.com/or7qx6e6EB— Divya Spandana/Ramya (@divyaspandana) August 31, 2022