ಇದೇ 25ರಿಂದ ವೀಕೆಂಡ್ ವಿತ್ ರಮೇಶ್ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ನಡುವೆ ಮೊದಲ ಅತಿಥಿ ಯಾರೆಂಬುದು ಹೊರಬಿದ್ದಿದೆ. ಮೊದಲ ಅತಿಥಿಯಾಗಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಭಾಗಿಯಾಗುವುದು ಖಚಿತವಾಗಿದೆ. ಈ ಮೊದಲು ನಟ ರಿಷಭ್ ಶೆಟ್ಟಿ ಅಥವಾ ಪ್ರಭುದೇವ ಮೊದಲ ಅತಿಥಿಯಾಗಿರಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಕುತೂಹಲಕ್ಕೆ ತೆರೆಬಿದ್ದಿದೆ.
ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್ ಎಷ್ಟು ಮದುವೆಯಾಗಿದ್ದಾರೆ? 1500 ಕೋಟಿ ಆಸ್ತಿ ಕಬಳಿಸಲು ಈ ಮದುವೆಯಾದ್ರಾ ಪವಿತ್ರಾ..!
ವೀಕೆಂಡ್ ವಿಥ್ ರಮೇಶ್‌ಗೆ ಯಾರೆಲ್ಲಾ ಬರಲಿದ್ದಾರೆ?
ಹೌದು, ಇದೆ ಮಾರ್ಚ್ 25ರಿಂದ ʻವೀಕೆಂಡ್ ವಿಥ್ ರಮೇಶ್ 5ʼ ಪ್ರಾರಂಭವಾಗಲಿದೆ. ಮೊದಲ ಅತಿಥಿಯಾಗಿ ಮೋಹಕ ತಾರೆ ರಮ್ಯಾ ಬರಲಿದ್ದು, ಎರಡನೇ ಎಪಿಸೋಡ್ ನಲ್ಲಿ ಪ್ರಭುದೇವ ಸಾಧಕರ ಕುರ್ಚಿಯ ಮೇಲೆ ಕೂರಲಿದ್ದಾರೆ.
ಇದನ್ನು ಓದಿ: ಖ್ಯಾತ ನಟಿಗೆ ಈ ಹೆಸರೇ ಸಮಸ್ಯೆ; ವಿಚ್ಛೇದನ ಬಳಿಕ ಎದುರಾದ ಸಮಸ್ಯೆ ಬಿಚ್ಚಿಟ್ಟ ಮಲೈಕಾ ಆರೋರ
ಈ ಸೀಸನ್ನಲ್ಲಿ ಇವರ ಜೊತೆ ಧ್ರುವ ಸರ್ಜಾ, ರಚಿತಾ ರಾಮ್, ಕನಸಿನ ರಾಣಿ ನಟಿ ಮಾಲಾಶ್ರೀ, ಇಶಾ ಫೌಂಡೇಶನ್ನ ಜಗ್ಗಿ ವಾಸುದೇವ್, ಹೃದ್ರೋಗ ತಜ್ಞ ಮಂಜುನಾಥ್ ಸೇರಿ ಇನ್ನೂ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.. ಇನ್ನು 16 ಸಾಧಕರ ಬಳಿಕ, ನೂರನೇ ಸಾಧಕರು ಬರಲಿದ್ದು, ಆ ಎಪಿಸೋಡ್ಗೆ ಬಹಳ ವಿಶೇಷ ಅತಿಥಿಯೊಬ್ಬರು ಸಾಧಕರ ಕುರ್ಚಿ ಏರಲಿದ್ದಾರೆ.
ಇದನ್ನು ಓದಿ: ‘ಆರ್ ಯು ವರ್ಜಿನ್’ ಎಂದವನಿಗೆ.. ನಟಿ ಶ್ರುತಿ ಹಾಸನ್ ಶಾಕಿಂಗ್ ಉತ್ತರ..!
ರಾಜಕಾರಣಿಗಳಿಗಿಲ್ಲ ಪ್ರವೇಶ?!
‘ವೀಕೆಂಡ್ ವಿಥ್ ರಮೇಶ್’ ಐದನೇ ಸಂಚಿಕೆಯು ಶೀಘ್ರ ಆರಂಭವಾಗಲಿದ್ದು, ಮೊದಲನೇ ಎಪಿಸೋಡ್ ನಲ್ಲಿ ರಮ್ಯಾ ಇರಲಿದ್ದಾರೆಂದು ನಿರ್ದೇಶಕ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ. ಸಾಧಕರ ಕುರ್ಚಿ ಅನಾವರಣ ಮಾಡಿ ಮಾತನಾಡಿದ ನಿರ್ದೇಶಕ ರಾಘವೇಂದ್ರ ಹುಣಸೂರು, ಮುಂದಿನ ದಿನಗಳಲ್ಲಿ ಪ್ರಭುದೇವ, ಧ್ರುವ ಸರ್ಜಾ, ರಚಿತಾ ರಾಮ್ ಹೀಗೆ ಹಲವರು ಕುರ್ಚಿ ಮೇಲೆ ಕುಳಿತುಕೊಳ್ಳಲಿದ್ದಾರೆ. ನಾವಿನ್ನೂ ಸಾಧನೆ ಮಾಡಿಲ್ಲ, ಮತ್ತೆ ಬರುತ್ತೇವೆಂಬ ವರ್ಗವೂ ಹುಟ್ಟಿಕೊಂಡಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹಿನ್ನಲೆ ಚುನಾವಣೆ ಮುಗಿಯುವವರೆಗೆ ರಾಜಕಾರಣಿಗಳನ್ನು ಸಂದರ್ಶಿಸಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ಈ ನಟನನ್ನು ಕೊಲ್ಲುವುದೇ ನನ್ನ ಜೀವನದ ಗುರಿ; ಜೀವ ಬೆದರಿಕೆ, ಮನೆ ಖಾಲಿ ಮಾಡಿದ ಸಲ್ಮಾನ್ ಖಾನ್