ಖ್ಯಾತ ನಟಿ ಪ್ರಿಯಾಮಣಿಗೆ ‘ಕಪ್ಪುಗೆ ಆಂಟಿಯಂತೆ’ ಕಾಣುತ್ತೀಯ ಎಂದು ಹೇಳಿದ್ದರಂತೆ!

ಇತ್ತೀಚಿನ ದಿನಗಳಲ್ಲಿ, ಸ್ಟಾರ್ ನಟಿಯರಿಂದ ಹಿಡಿದು ಸಾಮಾನ್ಯ ನಟಿಯರವರೆಗೆ ಎಲ್ಲರೂ ಟ್ರೊಲ್ ಗೆ ಒಳಗಾಗುತ್ತಿದ್ದು, ಇತ್ತೀಚೆಗೆ ನಟಿ ಪ್ರಿಯಾಮಣಿ ಕೂಡ ಈ ಪಟ್ಟಿಗೆ ಸೇರಿದ್ದಾರೆ. ಹೌದು, ಪ್ರಿಯಾಮಣಿ ಇತ್ತೀಚೆಗೆ ನಟಿಸಿದ ‘ ಫ್ಯಾಮಿಲಿ ಮ್ಯಾನ್…

ಇತ್ತೀಚಿನ ದಿನಗಳಲ್ಲಿ, ಸ್ಟಾರ್ ನಟಿಯರಿಂದ ಹಿಡಿದು ಸಾಮಾನ್ಯ ನಟಿಯರವರೆಗೆ ಎಲ್ಲರೂ ಟ್ರೊಲ್ ಗೆ ಒಳಗಾಗುತ್ತಿದ್ದು, ಇತ್ತೀಚೆಗೆ ನಟಿ ಪ್ರಿಯಾಮಣಿ ಕೂಡ ಈ ಪಟ್ಟಿಗೆ ಸೇರಿದ್ದಾರೆ.

ಹೌದು, ಪ್ರಿಯಾಮಣಿ ಇತ್ತೀಚೆಗೆ ನಟಿಸಿದ ‘ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿ’ ಸೂಪರ್ ಹಿಟ್ ಆಗಿದೆ. ಪ್ರಸ್ತುತ ಆ ಯಶಸ್ಸನ್ನು ಅನುಭವಿಸುತ್ತಿರುವ ಪ್ರಿಯಮಣಿ, ಓ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Vijayaprabha Mobile App free

ತಾನು ಕೂಡ ಟ್ರೋಲ್‌ಗಳಿಗೆ ಒಳಗಾಗಿದ್ದು, ಕಪ್ಪುಗೆ ಆಂಟಿಯಂತೆ ಇದೆಯಾ ಎಂದು ಕೆಲವು ಜನರು ಘೋರವಾದ ಕಾಮೆಂಟ್ಗಳನ್ನು ಮಾಡಿದ್ದರು ಎಂದು ನಟಿ ಪ್ರಿಯಾಮಣಿ ತನಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ‘ಒಮ್ಮೆ ನಾನು ಮೇಕಪ್ ಇಲ್ಲದೆ ಪೋಸ್ಟ್ ಹಾಕಿದ್ದು, ಅದನ್ನು ನೋಡಿದ ಕೆಲವರು ನಿಮ್ಮನ್ನು ಮೇಕಪ್‌ನೊಂದಿಗೆ ನೋಡುವುದಕ್ಕೆ ಚೆನ್ನಾಗಿದ್ದೀರಾ, ಇಲ್ಲದಿದ್ದರೆ ಆಂಟಿಯಂತೆ ಕಾಣಿಸುತ್ತೀಯಾ ಎಂದು ಹೇಳಿದ್ದರು. ಇನ್ನು, ಕೆಲವರು ಕಪ್ಪುಗೆ ಮತ್ತು ವಯಸ್ಸಾದವರಂತೆ ಕಾಣುತ್ತಿಯ ಎಂದು ಕಾಮೆಂಟ್ಗಳನ್ನು ಮಾಡಿದ್ದರು ಎಂದು ಪ್ರಿಯಾಮಣಿ ಹೇಳಿದರು.

ಇದಕ್ಕೆ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿದ ನಟಿ ಪ್ರಿಯಾಮಣಿ, “ನಾನು ಕಪ್ಪು ಗೆ ಇದ್ದರೇನು, ಅದು ನನಗೆ ಪ್ರಾಬ್ಲಮ್ ಅಲ್ಲ. ನನಗೆ ಬೇಕಾದಾಗ ನಾನು ಮೇಕಪ್ ಧರಿಸುತ್ತೇನೆ.ಮೇಕಪ್ ಅನ್ನು ಶೂಟಿಂಗ್ಗಾಗಿ ಮಾತ್ರ ಬಳಸುತ್ತೇನೆ. ಉಳಿದ ಸಮಯ ಮೇಕಪ್ ಬಳಸುವುದಿಲ್ಲ. ಮೇಕಪ್ ಏಕೆ ಧರಿಸಬೇಕು? “ಇದು ನಾನು, ನಾನಾಗಿಯೇ ಇರುತ್ತೇನೆ. ಅದೇ ನನಗೆ ಸೌಕರ್ಯ ಎಂದು ಖಾರವಾಗಿ ಸಮಾಧಾನ ನೀಡಿದ್ದರು. ಹಾಗೆಯೇ ‘ದಪ್ಪಗೆ ಆಂಟಿಯಂತೆ ಕಾಣುತ್ತೀಯ ಎಂದಿದ್ದರು. ಎಲ್ಲರಿಗೂ ವಯಸ್ಸಾಗುತ್ತದೆ, ನಾಳೆ ನಿಮಗೂ ಕೂಡ. “ವಯಸ್ಸಿನೊಂದಿಗೆ ಬರುವ ಬದಲಾವಣೆಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ನಾನು ನಂಬುತ್ತೇನೆ” ಎಂದು ನಟಿ ಪ್ರಿಯಾಮಣಿ ಹೇಳಿದರು.

ಇನ್ನು, ತನ್ನ ಪತಿ ಮುಸ್ತಫಾ ರಾಜ್ ಅವರು ಯಾವಾಗಲು ಮೇಕಪ್ ಧರಿಸಬೇಕು, ಸುಂದರವಾಗಿ ಕಾಣಬೇಕು ಮತ್ತು ಆಹ್ಲಾದಕರವಾಗಿರಬೇಕು ಎಂದು ಹೇಳುತ್ತಿರುತ್ತಾರೆ. ಕೆಲವೊಮ್ಮೆ ಅದು ಸರಿ ಎಂದು ತೋರುತ್ತದೆ, ಆದರೆ ಕೆಲವೊಮ್ಮೆ ನಮ್ಮ ವ್ಯಕ್ತಿತ್ವವನ್ನು ಇತರರಿಗಾಗಿ ಏಕೆ ಬದಲಾಯಿಸಿಕೊಳ್ಳಬೇಕು ಅನಿಸುತ್ತದೆ ಎಂದು ನಟಿ ಪ್ರಿಯಾಮಣಿ ಹೇಳಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.