ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ನೆರೆ ಉಂಟಾಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿ ಆಗಿದ್ದು, ಸಾವಿರಾರು ಮನೆಗಳು ಕುಸಿದು ಬಿದ್ದಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನು ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ-ನೆರೆಯಿಂದ ಅನೇಕರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಸರ್ಕಾರ ದಸರಾ ಸಂಭ್ರಮದಲ್ಲಿರುವ ಈ ನಡುವೆ ನಟಿ ಪ್ರಣಿತಾ ಸುಭಾಷ್ ಅವರು ಉತ್ತರ ಕರ್ನಾಟಕ & ಪಕ್ಕದ ರಾಜ್ಯದ ಹೈದ್ರಾಬಾದ್ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ.
ಈ ಕುರಿತು ನಟಿ ಪ್ರಣೀತ ಸುಭಾಷ್ ಟ್ವೀಟ್ ಮಾಡಿದ್ದೂ, “ನಮ್ಮಲ್ಲಿ ಹೆಚ್ಚಿನವರು ದಸರಾ ಆಚರಿಸುತ್ತಿದ್ದರೆ, ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ನ ಅನೇಕ ಕುಟುಂಬಗಳು ಪ್ರವಾಹದಿಂದ ಬಳಲುತ್ತಿದ್ದಾರೆ. 1 ಲಕ್ಷ ಸಣ್ಣ ಕೊಡುಗೆಯೊಂದಿಗೆ ಪ್ರಣಿತಾ ಫೌಂಡೇಶನ್ ವತಿಯಿಂದ ನಾವು ಪ್ರವಾಹ ಪೀಡಿತ ಪ್ರದೇಶಗಳಿಗೆ ಕೆಲವು ಮೂಲಭೂತ ಅಗತ್ಯಗಳನ್ನು ಕಳುಹಿಸುವಲ್ಲಿ ಯಶಸ್ವಿಯಾಗಿದ್ದೇವೆ” ಎಂದು ಸಂತ್ರಸ್ತರಿಗೆ ಕಳುಹಿಸುತ್ತಿರುವ ಸರಕುಗಳನ್ನು ಪೋಸ್ಟ್ ಮಾಡಿ ಟ್ವೀಟ್ ಮಾಡಿದ್ದಾರೆ
ನಟಿ ಪ್ರಣಿತಾ ಅವರು ಲಾಕ್ ಡೌನ್ ಸಂದರ್ಭದ ವೇಳೆಯೂ ಸಹ ನೊಂದವರಿಗೆ ನೆರವಾಗಿದ್ದರು. ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಹೈದರಾಬಾದ್ ನೆರೆ ಬಗ್ಗೆ ಮಾತ್ರ ಟ್ವೀಟ್ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ನಟಿ ಪ್ರಣಿತಾ ಸುಭಾಷ್ ಅವರು ಕರ್ನಾಟಕ & ಪಕ್ಕದ ರಾಜ್ಯದ ಹೈದ್ರಾಬಾದ್ ಸಂತ್ರಸ್ತರ ನೆರವಿಗೆ ಧಾವಿಸಿದ್ದು ಮಾನವೀಯತೆ ಮೆರೆದಿದ್ದಾರೆ.
Follow up : While most of us are celebrating Dussehra, many families in North Karnataka and Hyderabad have been affected by floods . With a small contribution of ₹1L from @PranithaFounda1 , we managed to send some basic essentials to both the flood affected areas…. 1/2
🧿 pic.twitter.com/jyDQetFYj4— Pranitha Subhash (@pranitasubhash) October 26, 2020