ಉದ್ಯಮಿಯೊಬ್ಬರು ತಮ್ಮ ಸಂಬಳದ ಹೆಂಡತಿಯಾಗಲು ತಿಂಗಳಿಗೆ ₹ 25 ಲಕ್ಷ ನೀಡುವುದಾಗಿ ಆಫರ್ ಮಾಡಿದ್ದರು ಎಂದು ನಟಿ ನೀತು ಚಂದ್ರ ಹೇಳಿ ಸಂಚಲನ ಮೂಡಿಸಿದ್ದಾರೆ.
ಹೌದು, ಸಂದರ್ಶನವೊಂದರಲ್ಲಿ ತನ್ನ ನೋವು ಬಿಚ್ಚಿಟ್ಟ ನಟಿ ನೀತು ಚಂದ್ರ, ’13 ರಾಷ್ಟ್ರೀಯ ಪ್ರಶಸ್ತಿ ವಿಜೇತರ’ ಜೊತೆ ಕೆಲಸ ಮಾಡಿದರೂ, ಈಗ ನನ್ನತ್ರ ಹಣವೂ ಇಲ್ಲ, ಕೆಲಸವೂ ಇಲ್ಲ ಎಂದು ಹೇಳಿದ್ದಾರೆ. ಪ್ರಸಿದ್ಧ ಕಾಸ್ಟಿಂಗ್ ನಿರ್ದೇಶಕರೊಬ್ಬರು ಆಡಿಷನ್ ಮಾಡಿ ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿದ ಒಂದು ಗಂಟೆಯೊಳಗೆ ತಿರಸ್ಕರಿಸಿದರು ಎಂದು ನೆನಪಿಸಿಕೊಂಡ ನೀತು. ತನ್ನ ಇಂದಿನ ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ನಟಿ ನೀತು ಚಂದ್ರ ಅವರು ಗರಂ ಮಸಾಲಾ (2005) ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ, ಗಗನಸಖಿಯ ಪಾತ್ರವನ್ನು ನಿರ್ವಹಿಸಿದ್ದರು. ಅಲ್ಲಿಂದೀಚೆಗೆ ಅವರು ಟ್ರಾಫಿಕ್ ಸಿಗ್ನಲ್, ಒನ್ ಟೂ ತ್ರೀ, ಓಯ್ ಲಕ್ಕಿ ಲಕ್ಕಿ ಓಯೆ, ಅಪಾರ್ಟ್‌ಮೆಂಟ್, 13 ಬಿ ಮುಂತಾದ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೆಫಾಲಿ ಶಾ, ರಾಹುಲ್ ಬೋಸ್ ಮತ್ತು ಸುಮೀತ್ ರಾಘವನ್ ಜೊತೆಗಿನ ಕುಚ್ ಲವ್ ಜೈಸಾ ನಟಿ ನೀತು ಚಂದ್ರ ಅವರ ಕೊನೆಯ ಹಿಂದಿ ಚಿತ್ರವಾಗಿದೆ.
ಇನ್ನು, ಓಯೆ ಲಕ್ಕಿ ಲಕ್ಕಿ ಓಯೆ ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ನೀತೂ ಅಭಿನಯದ ಮಿಥಿಲಾ ಮಖಾನ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಲಭಿಸಿದೆ.