ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ಮೆಹ್ರೀನ್ ಪಿರ್ಝಾದಾ ಅವರು ಹರಿಯಾಣದ ಮಾಜಿ ಸಿಎಂ ಭಜನ್ ಲಾಲ್ ಅವರ ಮೊಮ್ಮಗ ಯುವ ರಾಜಕಾರಣಿ, ಕಾಂಗ್ರೆಸ್ ಯುವ ಮುಖಂಡ ಭವ್ಯ ಬಿಷ್ಣೋಯಿ ಜೊತೆ ಮದುವೆಗೆ ಸಜ್ಜಾಗುತ್ತಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಲಾಕ್‌ಡೌನ್ ಸಮಯದಲ್ಲಿ ನಟಿ ಮೆಹ್ರೀನ್ ಮತ್ತು ರಾಜಕಾರಣಿ ಭವ್ಯ ಬಿಷ್ಣೋಯಿ ಅವರ ಮದುವೆ ಮಾತುಕತೆ ನಡೆದಿದ್ದು, ರಾಜಸ್ಥಾನದ ಜೈಪುರದಲ್ಲಿ ಮಾರ್ಚ್ ತಿಂಗಳಿನಲ್ಲಿ ಇವರ ನಿಶ್ಚಿತಾರ್ಥ ನೆರವೇರಿಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ನಟಿ ಮೆಹ್ರೀನ್ ತಮಿಳಿನ ನೇಂಜಿ ತುನೀವಿರುಂಡಾಳ್, ಪಟಾಸ್ ಸೇರಿದಂತೆ ತೆಲುಗಿನ ಮಹಾನುಭಾವಡು, ರಾಜ ದಿ ಗ್ರೇಟ್, ಎಫ್-2, ಪಟಾಸ್, ಅಶ್ವತ್ಥಾಮ ಸೇರಿ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದು, ವಿಕ್ಟರಿ ವೆಂಕಟೇಶ್ ಅಭಿನಯದ ಎಫ್-3 ಚಿತ್ರದಲ್ಲಿ ನಟಿಸುತ್ತಿದ್ದಾರೆ.
View this post on Instagram