ಚಿರು ಕಟೌಟ್ ಪಕ್ಕದಲ್ಲೇ ಮೇಘನಾ ರಾಜ್ ಸೀಮಂತ ಕಾರ್ಯ

ಬೆಂಗಳೂರು : ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನದ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಅವರ ಪತ್ನಿ ನಟಿ ಮೇಘನಾ ರಾಜ್ ಅವರ ಸೀಮಂತ ಕಾರ್ಯ ಇಂದು ಸುಂದರ್ ರಾಜ್ & ಸರ್ಜಾ ಕುಟುಂಬದವರು…

ಬೆಂಗಳೂರು : ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನದ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಅವರ ಪತ್ನಿ ನಟಿ ಮೇಘನಾ ರಾಜ್ ಅವರ ಸೀಮಂತ ಕಾರ್ಯ ಇಂದು ಸುಂದರ್ ರಾಜ್ & ಸರ್ಜಾ ಕುಟುಂಬದವರು ಸಮ್ಮುಖದಲ್ಲಿ ನೆರವೇರಿದೆ.

ನಟಿ ಮೇಘನಾ ರಾಜ್ ಅವರು ಪತಿ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಲ್ಲಿಯೇ ಅವರ ಕಟೌಟ್ ಪಕ್ಕದಲ್ಲಿ ಸೀಮಂತ ಕಾರ್ಯ ನೆರೆವೇರಿಸಿಕೊಂಡಿದ್ದಾರೆ. ಇನ್ನು, ಎರಡು ಕುಟುಂಬದವರು & ಆಪ್ತರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ನಟಿ ಮೇಘನಾ ರಾಜ್ ಅವಳಿ ಮಕ್ಕಳಿಗೆ ಜನ್ಮ ನೀಡಿದ ಫೋಟೋವನ್ನು ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ್ದರು. ಈ ಕುರಿತು ನಟಿ ಮೇಘನಾ ರಾಜ್ ಅವರು ಅಭಿಮಾನಿಗಳಿಗೆ ಯಾವುದೇ ವಿಡಿಯೋ ಮತ್ತು ಸುದ್ದಿಗಳಿಗೆ ಕಿವಿಗೊಡಬೇಡಿ, ನನ್ನ ಮತ್ತು ನಮ್ಮ ಕುಟುಂಬದವರ ಬಗ್ಗೆ ನಾನೆ ತಿಳಿಸುತ್ತೇನೆ ಎಂದು ಹೇಳಿದ್ದರು.

Vijayaprabha Mobile App free

ಈಗ ನಟಿ ಮೇಘನಾ ರಾಜ್ ಅವರು ಪತಿ ಚಿರಂಜೀವಿ ಸರ್ಜಾ ಅವರ ಕಟೌಟ್ ಪಕ್ಕದಲ್ಲಿ ಸೀಮಂತ ಕಾರ್ಯ ಮಾಡಿಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.