ದಿವಂಗತ ನಟ ಚಿರಂಜೀವಿ ಸರ್ಜಾ ನಿಧನ ನಂತರ ಒಂಟಿಯಾಗಿರುವ ನಟಿ ಮೇಘನಾ ರಾಜ್ 2ನೇ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೌದು, ಇತ್ತೀಚೆಗೆ ಬಾಲಿವುಡ್ ಬಬಲ್ ಅನ್ನೋ ವೆಬ್ಸೈಟ್ನೊಂದಿಗೆ ಮಾತನಾಡಿದ ನಟಿ ಮೇಘನಾ ರಾಜ್ ಅವರು, ಅದೆಷ್ಟೋ ಜನ ಮತ್ತೆ ಮದುವೆಯಾಗಲು ಹೇಳುತ್ತಿದ್ದಾರೆ. ಮತ್ತೆ ಕೆಲವರು ಒಂಟಿಯಾಗಿ ಮಗ ರಾಯನ್ ಅನ್ನು ನೋಡಿಕೊಳ್ಳಲು ಹೇಳುತ್ತಿದ್ದಾರೆ ಎಂದಿದ್ದಾರೆ.
ಇನ್ನು, ಮತ್ತೊಂದು ಸಂದರ್ಶನದಲ್ಲಿ, ನಾಳೆ ಹೇಗಿರುತ್ತೆ ಎಂದು ಯೋಚಿಸುವುದಿಲ್ಲ. ಮುಂದಿನ ಜೀವನ ಹೇಗಿರುತ್ತೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ಈ ವಿಚಾರ ಇನ್ನೂ ಯೋಚಿಸಿಲ್ಲ ಎಂದು ನಟಿ ಮೇಘನಾ ರಾಜ್ ಹೇಳಿದ್ದಾರೆ.
ಇನ್ನು, ನಟಿ ಮೇಘನಾ ರಾಜ್ ಅವರನ್ನು 2 May 2018 ಮದುವೆಯಾಗಿದ್ದ ದಿವಂಗತ ನಟ ಚಿರಂಜೀವಿ ಸರ್ಜಾ 7th June 2020 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದು, ಈ ದಂಪತಿಗೆ ರಾಯನ್ ರಾಜ್ ಸರ್ಜಾ ಎಂಬ ಮುದ್ದಾದ ಮಗು ಇದೆ.