ನಟ ಕಿಚ್ಚ ಸುದೀಪ್ ಅಭಿನಯದ ಗೂಳಿ ಸಿನಿಮಾದಲ್ಲಿ ಮಿಂಚಿದ್ದ ನಟಿ ಮಮತಾ ಮೋಹನ್ ದಾಸ್ ಅವರು ‘ವಿಟಿಲಿಗೋ’ ಎಂಬ ದೀರ್ಘಕಾಲದ ಸ್ವಯಂ ನಿರೋಧಕ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಮ್ ನಲ್ಲಿ ಮಾಹಿತಿ ನೀಡಿರುವ ನಟಿ ಮಮತಾ ಮೋಹನ್ ದಾಸ್ ಅವರು, ಈ ಕಾಯಿಲೆಯಿದ್ದವರಿಗೆ ಚರ್ಮ ಅಲ್ಲಲ್ಲಿ ಬಿಳಿ ಬಣ್ಣಕ್ಕೆ ಬದಲಾಗುತ್ತದೆ. ಈ ರೋಗದಿಂದ ಚರ್ಮ ಬಣ್ಣವನ್ನು ಕಳೆದುಕೊಳ್ಳುತ್ತದೆ ಮತ್ತು ಇದು ‘ವಿಟಲ್’ ರೀತಿಯ ಕಾಯಿಲೆಯಾಗಿದೆ ಎಂದು ಹೇಳಿದ್ದಾರೆ.
ಇನ್ನು, ಕಾಯಿಲೆ ಹಿನ್ನೆಲೆ ಸೂರ್ಯ ಕಿರಣಗಳಿಗೆ ಮೈ ಒಡ್ಡುವ ಸಲುವಾಗಿ ಸೂರ್ಯನಿಗಿಂತ ಮೊದಲು ಎದ್ದೇಳುತ್ತೇನೆ ಎಂದು ನಟಿ ಮಮತಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇತ್ತೀಚೆಗೆ ಇನ್ಸ್‌ಟಾದಲ್ಲಿ, ‘ಪ್ರಿಯ ಸೂರ್ಯ, ನಿನ್ನ ನೋಡಲು ನಾನು ಎಚ್ಚರಗೊಳ್ಳುತ್ತೇನೆ. ನಿನ್ನ ಶಕ್ತಿಯನ್ನು ನನಗೆ ಕೊಡು. ನಾನು ಋಣಿಯಾಗಿರುತ್ತೇನೆ’ ಎಂದು ಬರೆದಿದ್ದಾರೆ.
ಇನ್ನು, ನಟಿ ಮಮತಾ ಮೋಹನ್ ದಾಸ್ ಕನ್ನಡದ ಗೂಳಿ ಸಿನಿಮಾ ಸೇರಿದಂತೆ ತೆಲುಗಿನ ಯಮದೊಂಗ, ಚಿಂತಕಾಯಲ ರವಿ, ಕಿಂಗ್, ಕೆಡಿ ಸಿನಿಮಾಗಳಲ್ಲಿ ನಟಿಸಿದ್ದಾರೆ.